ಪತ್ತೆಯಾಗದ 18 ಟಗರುಗಳು

kuri
Published on

ಪರಶುರಾಮಪುರ: ಗ್ರಾಮದ ಧರ್ಮಪುರ ರಸ್ತೆಯಲ್ಲಿ ವಾಸವಿದ್ದ ಪಶುಪಾಲಕ ಸಿದ್ದರಾಮಯ್ಯ ಅವರು ಸಾಕಿದ್ದ 18 ಟಗರುಗಳು ಸೆ.7ರಂದು ಕಳುವಾಗಿದ್ದು, ಇಲ್ಲಿಯವರೆಗೂ ಪತ್ತೆಯಾಗಿಲ್ಲ.

ಎರಡು ತಿಂಗಳ ಹಿಂದೆ 1.20 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದ ಟಗರು ಮರಿಗಳನ್ನು ತೋಟದ ಶೆಟ್ಟಿನಲ್ಲಿ ಸಾಕಾಣಿಕೆ ಮಾಡುತ್ತಿದ್ದರು. ಆದರೆ, ಎಂಟು ದಿನದ ಹಿಂದೆ ರಾತ್ರಿ ಕಳವು ಆಗಿದ್ದು, ಈ ಸಂಬಂದ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಟಗರುಗಳು ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಇದರಿಂದ ಪಶುಪಾಲಕ ಸಿದ್ದರಾಮಯ್ಯ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪಿಎಸ್ಸೈ ಎಂ.ಕೆ.ಬಸವರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net