

ಮಾಂಜರಿ: ರಾಯಬಾಗ ತಾಲೂಕಿನ ಸೌಂದತ್ತಿ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಸುಮಾರು 18 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ ಹೆಚ್ಚಿನ ಪ್ರಮಾಣದ ಸಕ್ಕರೆ ಉತ್ಪಾದನೆ ಮಾಡಲಾಗಿದೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು .
ಅವರು ಶನಿವಾರ ರಾಯಬಾಗ ತಾಲೂಕಿನ ಸೌದತ್ತಿ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ಹಾಗೂ ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ಹೊಸ ದೆಹಲಿಯ ನಿರ್ದೇಶಕ ಯುವ ಮುಖಂಡ ಅಮಿತ್ ಕೋರೆ ಇವರ ಮಾರ್ಗದರ್ಶನದಲ್ಲಿ ಸಕ್ಕರೆ ಕಾರ್ಖಾನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಅತಿ ಹೆಚ್ಚು ಕಬ್ಬು ಪೂರೈಸಿ, ಹೆಚ್ಚು ಕಬ್ಬು ಸಾಗಣೆ ಮಾಡಿದ ಮತ್ತು ಕಟಾವು ಮಾಡಿದ ಹಲವಾರು ಕಾರ್ಮಿಕ, ರೈತರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ, ನಿರ್ದೇಶಕ ಭರತೇಶ ಬನಾವಣೆ, ಅಜಿತ್ ರಾವ್ ದೇಸಾಯಿ, ಮಲ್ಲಪ್ಪ ಮೈಶಾಳೆ, ಮಹಾವೀರ್ ಕಾತ್ರಾಳೆ, ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ಮುಖ್ಯಸ್ಥರಾದ ಬಿ.ಎ.ಪಾಟೀಲ್, ಜೆ ಕೃಷ್ಣನ್, ಬಿ.ಎ.ಪಾಟೀಲ, ಎನ್.ಎಸ್.ಮುಲ್ಲಾ, ವಿಜಯ ಪಾಟೀಲ್ ವೇದಿಕೆ ಮೇಲಿದ್ದರು. ಪಾಂಡು ಬಡಗಣ್ಣವರ್, ಸಂಜಯ ಯಾದವ, ರಾಘವೇಂದ್ರ ಪತ್ತಾರ, ಮಹಾವೀರ ಪಾಟೀಲ್, ಮಹಾಂತೇಶ ಕಾಡಾಪುರೆ ಹಾಜರಿದ್ದರು. ಕಾರ್ಯಕ್ರಮದಲ್ಲಿ ಬಿ.ಎಸ್.ಮುಧೋಳ ಸ್ವಾಗತಿಸಿದರು. ರಾಘವೇಂದ್ರ ಪತ್ತಾರ ನಿರೂಪಿಸಿದರು.