ದಾಖಲೆಯಿಲ್ಲದೆ ಸಾಗಿಸುತ್ತಿದ್ದ ೧೮ ಚಿನ್ನದ ಉಂಗುರ ವಶ

19 ckm 5
ಚಿಕ್ಕಮಗಳೂರು ಹೊರವಲಯದ ವಸ್ತಾರೆ ಚೆಕ್‌ಪೋಸ್ಟ್ನಲ್ಲಿ ವಶಕ್ಕೆ ಪಡೆದಿರುವ ಚಿನ್ನದ ಉಂಗುರಗಳು.
Published on

ಚಿಕ್ಕಮಗಳೂರು: ದಾಖಲೆ ಇಲ್ಲದೇ ಬಲೆನೋ ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಗ್ರಾಂ ತೂಕದ ೫ ಲಕ್ಷ ರೂ. ಮೌಲ್ಯದ ೧೮ ಚಿನ್ನದ ಉಂಗುರಗಳನ್ನು ವಸ್ತಾರೆ ಪೊಲೀಸ್ ಜಂಕ್ಷನ್ ಚೆಕ್‌ಪೋಸ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಾಹನ ತಡೆದು ರ‍್ಯಾಂಡಮ್ ತಪಾಸಣೆ ನಡೆಸುವ ವೇಳೆ ೯೦ ಗ್ರಾಂ ಮೌಲ್ಯದ ಚಿನ್ನಾಭರಣ ಬಲೆನೋ ಕಾರಿನಲ್ಲಿ ಪತ್ತೆಯಾಗಿದೆ. ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿರುವಂತೆ ಜಿಲ್ಲೆಯ ಆಂತರಿಕ ಭದ್ರತೆ ನಿಟ್ಟಿನಲ್ಲಿ ತಾಲೂಕ ತಾಲೂಕು ಮಧ್ಯೆಯೂ ಜಂಕ್ಷನ್ ಪಾಯಿಂಟ್‌ಗಳನ್ನು ತೆರೆಯಲಾಗಿತ್ತು.
ನಗರದ ಹೊರವಲಯದ ವಸ್ತಾರೆ ಬಳಿಯ ಚೆಕ್ ಪೋಸ್ಟ್ ಮಾರ್ಗವಾಗಿ ಬಂದ ಬಲೆನೋ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ೧೮ ಚಿನ್ನದ ಉಂಗುರಗಳು ಪತ್ತೆಯಾಗಿವೆ. ಕಾರಿನಲ್ಲಿದ್ದವರ ಬಳಿ ಚಿನ್ನಕ್ಕೆ ಸಂಬAಧಿಸಿದ ದಾಖಲೆಗಳು ಇಲ್ಲದ ಕಾರಣ ಉಂಗುರಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿಕ್ಕಮಗಳೂರು ನಗರದ ವಿಜಯಪುರದ ಚಿನ್ನದ ವ್ಯಾಪಾರಿಯೊಬ್ಬರು ಚಿನ್ನದ ಗಟ್ಟಿ ಖರೀದಿಸಿ ಅದರಿಂದ ಉಂಗುರಗಳನ್ನು ತಯಾರಿಸಿ ಉಡುಪಿಯ ಜ್ಯುವೆಲರಿ ಅಂಗಡಿ ಮಾಲೀಕರಿಗೆ ಕೊಡಲು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net