ಫೆ.22, 23ಕ್ಕೆ ಪ್ರಭಾತ್ ಕಲಾವಿದರಿಂದ ‘18 ದಿನಗಳು’ ಪ್ರದರ್ಶನ

18
Published on

ಬೆಂಗಳೂರು: ಮಹಾಭಾರತದ ಯುದ್ಧವು ನಡೆದಿದ್ದು 18 ದಿವಸಗಳ ಕಾಲ. ಅದೇ ಹೆಸರಿನಲ್ಲಿ ಅಂದರೆ ‘18 ದಿನಗಳು’ ಒಂದು ಯುಗದ ಮುಸ್ಸಂಜೆ! ಪ್ರದರ್ಶನವನ್ನು ಪ್ರಭಾತ್ ಕಲಾವಿದರು ಫೆ.22 ಮತ್ತು ಫೆ.23 ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಿದ್ದಾರೆ.

ನೃತ್ಯ, ಸಂಗೀತ, ವೈಮಾನಿಕ ಕ್ರಿಯೆಗಳು, ಸಮರ ಕಲೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳೊಂದಿಗೆ 18 ದಿನಗಳ ಕುರುಕ್ಷೇತ್ರವನ್ನು ಜೀವಂತವಾಗಿ ತರುವ ವಿಭಿನ್ನ ಪ್ರಯತ್ನ ಪ್ರಭಾತ್ ಕಲಾವಿದರಿಂದ ಅನಾವರಣಗೊಳ್ಳಲಿದೆ.

ಶಿಕ್ಷಣ ಸಂಸ್ಥೆಗೆ ನಿಧಿಸಂಗ್ರಹಕ್ಕಾಗಿ ಈ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಫೆ.22 ರಂದು ಸಂಜೆ 6.30ಕ್ಕೆ ಕನ್ನಡ ಆವೃತ್ತಿ ಹಾಗೂ ಫೆ.23 ರಂದು ಸಂಜೆ 6.30ಕ್ಕೆ ಇಂಗ್ಲೀಷ್ ಆವೃತ್ತಿಯ ಪ್ರದರ್ಶನ ನಡೆಯಲಿದೆ.

ಈ ಪ್ರದರ್ಶನವು ವಿವಿಧ ನೃತ್ಯ ಪ್ರಕಾರಗಳು ಮತ್ತು ಸಿಂಫನಿ ಶೈಲಿಯ ಸಂಗೀತವನ್ನು ಒಳಗೊಂಡಿದ್ದು, 50ಕ್ಕೂ ಹೆಚ್ಚಿನ ನುರಿತ ಶಾಸ್ತ್ರೀಯ ನರ್ತಕರು ಮತ್ತು ನಟರ ತಂಡವು ಮಹಾಭಾರತದ ಪ್ರಮುಖ ಪಾತ್ರಗಳಿಗೆ ಜೀವ ತುಂಬಲಿದ್ದಾರೆ.

ನಿರ್ದೇಶನ ಭರತ್ ಆರ್ ಪ್ರಭಾತ್, ಚಿತ್ರಕಥೆ ಶರತ್ ಆರ್ ಪ್ರಭಾತ್, ಸಂಗೀತ ಸಂಯೋಜನೆ ಸಾತ್ವಿಕ್ ಚಕ್ರವರ್ತಿ. ಸೌಂಡ್ ಇಂಜಿನಿಯರ್ ಅಶ್ವಿನ್ ಜೆ. ಪ್ರಭಾತ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net