

ವಿಜಯಪುರ: ನಗರದ ವಿವಿಧೆಡೆ ಭಿಾಟನೆಯಲ್ಲಿ ತೊಡಗಿದ್ದ 18 ಜನ ಭಿಕ್ಷುಕರನ್ನು ಇಲ್ಲಿನ ಅಫಜಲಪುರ ಟಕ್ಕೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲು ಮಾಡಿ ಆಶ್ರಯ ಒದಗಿಸಲಾಯಿತು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಶುಕ್ರವಾರ ನಗರ ಸಂಚಾರ ಕೈಗೊಂಡ ಸಂದರ್ಭದಲ್ಲಿ ನಗರದ ವಿವಿಧೆಡೆ ಇರುವ ನಿರಾಶ್ರಿತರು ಮತ್ತು ಭಿಕ್ಷುಕರನ್ನು ಕಂಡು, ತಕ್ಷಣ ನಿರಾಶ್ರಿತ ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅವರನ್ನು ರಕ್ಷಣೆ ಮಾಡಿ ಆಶ್ರಯ ಒದಗಿಸಲು ಸೂಚನೆ ನೀಡಿದರು.
ನಗರದ ಲಕ್ಷಿ$್ಮ ಗುಡಿ ಹತ್ತಿರ, ಗಾಂಧಿ ಚೌಕ್, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ರೇಲ್ವೆ ಸ್ಟೇಷನ್ ಸೇರಿ ವಿವಿಧ ಸ್ಥಳಗಳಲ್ಲಿ ಭಿಾಟನೆ ಮಾಡುತ್ತಿದ್ದ 16 ಜನರ ಪುರುಷ ಹಾಗೂ ಇಬ್ಬರು ಮಹಿಳೆಯರನ್ನು ನಿರಾಶ್ರಿತರ ಪರಿಹಾರ ಕೇಂದ್ರದ ಸಿಬ್ಬಂದಿ ರಕ್ಷಣೆ ಮಾಡಿ ಆಶ್ರಯ ಒದಗಿಸಿದರು.
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಭಿಕ್ಷುಕರಿಗೆ ಹಾಸಿಗೆ, ಹೊದಿಕೆ, ಬಟ್ಟೆ, ಆರೋಗ್ಯ ತಪಾಸಣೆ ಮತ್ತು ಬೆಳಗ್ಗೆ ಯೋಗಾಸನ, ಉಪಾಹಾರ ಮತ್ತು ಊಟ ಒದಗಿಸುತ್ತಿದ್ದು, ಸಂಜೆ ವೇಳೆ ಕ್ರೀಡಾ ಚಟುವಟಿಕೆ ಹಾಗೂ ರಾತ್ರಿ ಸಮಯದಲ್ಲಿ ಮನರಂಜನೆ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ನಿರಾಶ್ರಿತರಿಗೆ ಹೊಲಿಗೆ ತರಬೇತಿ, ಕಚೇರಿ ಫೈಲ್ ತಯಾರಿಕೆ, ಅಡುಗೆ ಕೋಣೆ, ಊಟದ ಕೋಣೆ, ಪುರುಷರ ವಸತಿ ಗೃಹ, ಮಹಿಳಾ ವಸತಿ ಗೃಹ, ಕಚೇರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಬಗ್ಗೆ ತರಬೇತಿ ಕೂಡ ನೀಡಲಾಗುತ್ತಿದೆ.
ನಗರದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದವರಲ್ಲಿ ಸುಧಾರಣೆ ಕಂಡು ಬಂದಲ್ಲಿ ಕೇಂದ್ರದಿಂದ ಬಿಡುಗಡೆ ಮತ್ತು ಸಂಬಂಧಿಕರ ಸರಿಯಾದ ವಿಳಾಸ ಮಾಹಿತಿ ಒದಗಿಸಿದರೆ ಅಂತಹವರನ್ನು ಸಂಬಂಧಿಕರಿಗೆ ಒಪ್ಪಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದಲ್ಲಿ ಒಟ್ಟು 21 ಜನ ಅಧಿಕಾರಿ&ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆರೋಗ್ಯ ಚಿಕಿತ್ಸೆಗೆ ಕೇಂದ್ರದ ಆಸ್ಪತ್ರೆಯಲ್ಲಿ ವೈದ್ಯರು&ಶುಶ್ರೂಷಕರು ಲಭ್ಯವಿರುತ್ತಾರೆ. ಸದ್ಯ ಈ ಕೇಂದ್ರದಲ್ಲಿ 160 ಜನ ಪುರುಷರು ಹಾಗೂ 38 ಜನ ಮಹಿಳೆಯರು ಸೇರಿ 198 ಭಿಕ್ಷುಕರು&ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ.
ಸಾರ್ವಜನಿಕರು ಸಹ ನಗರದ ವಿವಿಧೆಡೆ ಇಂತಹ ಭಿಕ್ಷುಕರು, ನಿರಾಶ್ರಿತರು ಕಂಡು ಬಂದರೆ ಭಿಕ್ಷುಕರ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 10581 ಮತ್ತು ಮೊ. 9482300400 ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಕೂಡಲೇ ಅವರನ್ನು ರಕ್ಷಣೆ ಮಾಡಿ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗುತ್ತದೆ ಎಂದು ನಿರಾಶ್ರಿತರ ಕೇಂದ್ರದ ಅಧೀಕ್ಷಕ ಬಸವರಾಜ ನಾಟೀಕಾರ ತಿಳಿಸಿದ್ದಾರೆ.