18.85 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

crime
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಕೆಎಸ್‌ಆರ್‌ಟಿಸಿ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವ್ಯಕ್ತಿಯ 18.85 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಹಾಗೂ ವಜ್ರದ ಒಡವೆಗಳನ್ನು ಕಳ್ಳತನವಾದ ಘಟನೆ ಇತ್ತೀಚೆಗೆ ನಡೆದಿದೆ.
ರಿಜ್ವಾನ ಬಾಸರಿ ಎಂಬುವರು ಆಭರಣ ಕಳೆದುಕೊಂಡವರು. ಏ. 22ರಂದು ಮುಂಬೈ ಸಾಂತಾಕ್ರೂಸದಿಂದ ಹುಬ್ಬಳ್ಳಿ ಗೋಕುಲ ರೋಡ ಸಾಮ್ರಾಟ ಕೆಎಸ್‌ಆರ್‌ಟಿಸಿ ಕಲ್ಯಾಣಮಂಟಪಕ್ಕೆ ಬರುವ ಮಾರ್ಗ ಮಧ್ಯದಲ್ಲಿ 17.60 ಲಕ್ಷ ಮೌಲ್ಯದ 268 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ವಜ್ರ ಮತ್ತು 70 ಸಾವಿರ ರೂ. ಮೌಲ್ಯದ ಎರಡು ವಾಚ್, 55 ಸಾವಿರ ರೂ. ನಗದು ಸೇರಿ ಒಟ್ಟು 18.85 ಲಕ್ಷ ರೂ. ಮೌಲ್ಯದ ಆಭರಣಗಳು ಕಳ್ಳತನವಾಗಿವೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net