

ಚಿಕ್ಕೋಡಿ: ಪಟ್ಟಣದ ವಿವಿಧ ಬಡಾವಣೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಜಗದ್ಗುರು ಶ್ರೀ ಸಂಪಾದನ ಚರಮೂರ್ತಿಮಠದ ಆಶ್ರಯದಲ್ಲಿ ಆ.17ರಿಂದ ಸೆ.15ರ ವರೆಗೆ ಶರಣರ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಸಂಪಾದನಾ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ತಿಳಿಸಿದರು.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಮನ್ನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ, ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ವೈದ್ಯ ಸಾಹಿತಿ ಡಾ.ದಯಾನಂದ ನೂಲಿ ಉದ್ಘಾಟಿಸುವರು.
ಚಿಕ್ಕೋಡಿಯ ರಾಮನಗರದಲ್ಲಿರುವ ಪಂಚಮುಖಿ ಹನುಮಾನ ಮಂದಿರದ ಸಮುದಾಯ ಭವನದಲ್ಲಿ ಆ.17ರಿಂದ 21 ರ ವರೆಗೆ, ಹೊಸಪೇಟ ಗಲ್ಲಿಯ ಮಹಾದೇವ ಮಂದಿರ ಆವರಣದಲ್ಲಿ ಆ.22ರಿಂದ 26ರ ವರೆಗೆ, ಶಿವಶರಣ ಹರಳಯ್ಯ ಮಂದಿರದ ಸಮುದಾಯ ಭವನದಲ್ಲಿ ಆ.31ರಿಂದ ಸೆ.4ರ ವರೆಗೆ, ಇಂದಿರಾ ನಗರ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಭಾಭವನ, ಗಣೇಶ ನಗರ ಶಂಕರ ಲಿಂಬಿಗಿಡದ ಮಾಳಿ ಸಮುದಾಯ ಭವನದಲ್ಲಿ ಸೆ.5ರಿಂದ 9ರ ವರೆಗೆ ಹಾಗೂ ಕಾಳಾ ಮಾರುತಿ ಗಲ್ಲಿಯ ಕಾಳಾ ಮಾರುತಿ ಮಂದಿರದ ಆವರಣದಲ್ಲಿ ಸೆ.10ರಿಂದ 14ರ ವರೆಗೆ ಪ್ರತಿ ದಿನ ಸಂಜೆ 6.30 ರಿಂದ 8ರ ವರೆಗೆ ಪ್ರವಚನ ಜರುಗಲಿದೆ. ಸೆ.15ರಂದು ಬೆಳಗ್ಗೆ 10 ಗಂಟೆಗೆ ಪಲ್ಲಕ್ಕಿ ಮಹೋತ್ಸವ, ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಆಯೋಜಿಸಲಾಗಿದೆ ಎಂದು ತಿಳಿಸಿದರು.