17ರಂದು ಶಾಂತಿಸಾಗರ ಮಹಾರಾಜರ ಪುಣ್ಯತಿಥಿ

06..3
ಬೋರಗಾಂವ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ವೀರಸೇವಾ ದಳದ ಕೇಂದ್ರ ಸಮಿತಿ ಅಧ್ಯಕ್ಷ ಬಾಳಾಸಾಹೇಬ ಪಾಟೀಲ ಮಾತನಾಡಿದರು. ರಾವಸಾಹೇಬ ಪಾಟೀಲ, ಸುಭಾಷ ಮಗದುಮ್ಮ, ಅಭಯಕುಮಾರ ಕರೋಲೆ, ಅನಂತಸಾಗರ ಗೋರವಾಡೆ ಇತರರಿದ್ದರು.
Published on

ಬೋರಗಾಂವ: ಶಾಂತಿಸಾಗರ ಮಹಾರಾಜರ 68ನೇ ಪುಣ್ಯತಿಥಿ ಮಹೋತ್ಸವವು ಸೆ.17ರಂದು ಮಿರಜ ನಗರದಲ್ಲಿ ಆಯೋಜಿಸಲಾಗಿದೆ ಎಂದು ವೀರಸೇವಾದಳದ ಕೇಂದ್ರ ಸಮಿತಿ ಅಧ್ಯಕ್ಷ ಬಾಳಾಸಾಹೇಬ ಪಾಟೀಲ ಹೇಳಿದರು.


ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪುಣ್ಯತಿಥಿ ನಿಮಿತ್ತ ಸೆ. 10ರಂದು ಆರೋಗ್ಯ ಶಿಬಿರ, 12ರಂದು ಶಾಂತಿ ಕಳಶ ಪ್ರವರ್ಥನೆ, 14ರಂದು ವೃಕ್ಷಾರೋಪಣ, 15ರಿಂದ 17ರ ವರೆಗೆ ಕೃಷಿ ಪ್ರದರ್ಶನ, 17ರಂದು ಶಾಂತಿದೀಪ ಪ್ರಜ್ವಲನೆ, ವಿಶ್ವಶಾಂತಿ ಪ್ರಾರ್ಥನೆ ಹಾಗೂ ಧ್ವಜಾರೋಹಣ, ಶಾಂತಿಕಳಶದ ಭವ್ಯ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ.

17ರಂದು ಅಹಿಂಸೆ, ಸಸ್ಯಾಹಾರ, ವ್ಯಸನ, ರಾಷ್ಟ್ರೀಯ ಏಕೀಕರಣ, ಶಾಂತಿ ಮತ್ತು ಸದ್ಭಾವನಾ ರ‌್ಯಾಲಿ ಆಯೋಜಿಸಲಾಗಿದೆ. ಸ್ವಸ್ತಿಶ್ರೀ ಜೀನಸೇನ ಭಟ್ಟಾರಕ ಸ್ವಾಮಿಗಳು ಹಾಗೂ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ದ.ಭಾ.ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸುವರು. ಸಾಂಗಲಿ ಡಿಸಿ, ಎಸ್ಪಿ ಇರಲಿದ್ದಾರೆ. ಉಪಾಧ್ಯಕ್ಷ ಸುಭಾಷ ಮಗದುಮ್ಮ ಮಾತನಾಡಿ, ಮಹಾರಾಷ್ಟ್ರ ರಾಜ್ಯ ಕಾರ್ಮಿಕ ಸಚಿವ ಡಾ.ಸುರೇಶಭಾವು ಖಾಡೆ, ಖ್ಯಾತ ಉಪನ್ಯಾಸಕ ಗಣೇಶ ಶಿಂಧೆ, ಮಾಜಿ ಸಂಸದ ರಾಜು ಶೆಟ್ಟಿ, ಶಾಸಕರಾದ ಸುೀರ್ ಗಾಡ್ಗೀಳ್, ಅಭಯ ಪಾಟೀಲ, ಸುಮನ್ ಆರ್. ಪಾಟೀಲ, ಅನಿಲ ಬಾಬರ, ವಿಕ್ರಮಸಿಂಹ ಸಾವಂತ, ಮಾಜಿ ಶಾಸಕ ವೀರಕುಮಾರ ಪಾಟೀಲ್, ಯುವ ಮುಖಂಡ ಉತ್ತಮ್ ಪಾಟೀಲ ಭಾಗವಹಿಸಲಿದ್ದಾರೆ ಎಂದರು.ಅಜಿತಕುಮಾರ ಬಂಡೆ, ಅನಂತ ಸಾಗರ ಗೋರವಾಡೆ, ಅಭಯ ಪಾಟೀಲ, ಸುನೀಲ ಪಾಟೀಲ, ಸುರೇಶಬಾಪು ಅವಟಿ, ಬಂಡು ಶೇಟೆ, ಅಭಯಕುಮಾರ ಕರೋಲೆ, ರಾವಸಾಹೇಬ ಕುನ್ನೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net