177 ವಿದ್ಯಾರ್ಥಿಗಳು ಗೈರು

City 9 PUC Board
Published on

ಚಿತ್ರದುರ್ಗ:ಮಂಗಳವಾರ ನಡೆದ ದ್ವಿತೀಯ ಪಿಯುಸಿ ಇತಿಹಾಸ ಹಾಗೂಭೌತಶಾಸ್ತ್ರ ವಿಷಯಗಳ ಪೂರಕ ಪರೀಕ್ಷೆಗೆ ಕ್ರಮವಾಗಿ 99 ಹಾಗೂ 78 ವಿದ್ಯಾರ್ಥಿಗಳು ಸೇರಿ 177 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇತಿಹಾಸ ಪರೀಕ್ಷೆಗೆ 780 ವಿದ್ಯಾರ್ಥಿಗಳು ನೋಂದಣಿಯಾಗಿದ್ದು,ಇವರಲ್ಲಿ 681ಹಾಗೂ ಭೌತಶಾಸ್ತ್ರ ವಿಷಯದಲ್ಲಿ 1091 ವಿದ್ಯಾರ್ಥಿಗಳ ಪೈಕಿ 1031 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲೆಯ 9 ಕೆಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಮೇ 2ರಂದು ಇಂಗ್ಲಿಷ್ ವಿಷಯದ ಪರೀಕ್ಷೆ ಇರುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net