175 ನೃತ್ಯ ಪಟುಗಳಿಂದ ನೃತ್ಯೋತ್ಸವ ನಾಡಿದ್ದು

h15-sujay
Published on

ಹುಬ್ಬಳ್ಳಿ: ಕಲಾ ಸುಜಯದ 175ನೇ ನೃತ್ಯ ಪ್ರದರ್ಶನ ಹಿನ್ನೆಲೆಯಲ್ಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸೆ. 18ರಂದು ಸಂಜೆ 4.45ಕ್ಕೆ 175 ನೃತ್ಯ ಪಟುಗಳಿಂದ ಸಂಭ್ರಮ-ನೃತ್ಯೋತ್ಸವ ಆಯೋಜಿಸಲಾಗಿದೆ ಎಂದು ಕಲಾ ಸುಜಯ ಮ್ಯಾನೇಜಿಂಗ್ ಟ್ರಸ್ಟಿ ಸುಜಯ ಶಾನಭಾಗ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವೆಂದರೆ 5 ವರ್ಷದಿಂದ 75 ವರ್ಷ ವಯಸ್ಸಿನ 175 ನೃತ್ಯ ಪಟುಗಳು ಭಾಗವಹಿಸಲಿದ್ದಾರೆ. ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡಿ, ಜನಮನ ರಂಜಿಸಲಿದ್ದಾರೆ. ಡಾ. ಕ್ರಾಂತಿಕಿರಣ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಶಿಕ್ಷಕಿ ವಿಜಯಲಕ್ಷ್ಮೀ ಅತಿಥಿಗಳಾಗಿ ಆಗಮಿಸುವರು ಎಂದರು.

ಕಿರಣ ಅಡಕೆ, ನಯನಾ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net