ಚಿಕ್ಕೋಡಿ ಸಂಸದರ ಕ್ಷೇತ್ರದಲ್ಲಿ ಪ್ರತಿಭಾ ಸ್ಪರ್ಧೆ

4
ಚಿಕ್ಕೋಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಿ.ಎಂ.ಐಹೊಳೆ ಮಾತನಾಡಿದರು. ಜಗದೀಶ ಕವಟಗಿಮಠ, ದುಂಡಪ್ಪ ಬೆಂಡವಾಡೆ, ಬಸವಪ್ರಸಾದ ಜೊಲ್ಲೆ, ಪವನ ಪಾಟೀಲ, ವಿಶ್ವನಾಥ ಕಮತೆ ಇತರರಿದ್ದರು.
Published on

ಚಿಕ್ಕೋಡಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಜನ್ಮದಿನದ ಅಂಗವಾಗಿ ಲೋಕಸಭೆ ೇತ್ರ ವ್ಯಾಪ್ತಿಯಲ್ಲಿನ ಪ್ರತಿಭೆಗಳನ್ನು ಗುರುತಿಸಲು ಟ್ಯಾಲೆಂಟ್​(ಪ್ರತಿಭೆ) ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜನ್ಮದಿನದ ಆಚರಣೆ ಸಮಿತಿ ಅಧ್ಯ ದುಯೋರ್ಧನ ಐಹೊಳೆ ಹೇಳಿದರು.

ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನ್ಮದಿನದ ಆಚರಣೆ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ವಿಧಾನಸಭೆ ೇತ್ರದಲ್ಲಿ ಸೆ.24 ರಿಂದ ಅ. 2ರವರೆಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅ.7 ರಂದು ಚಿಕ್ಕೋಡಿ ಆರ್​.ಡಿ.ಹೈಸ್ಕೂಲ್​ ಮೈದಾನದಲ್ಲಿ ಗ್ರಾಂಡ್​ ಫಿನಾಲೆ ಏರ್ಪಡಿಸಲಾಗಿದೆ. ವಿಜೇತರಿಗೆ ಅ.8 ರಂದು ಜರುಗಲಿರುವ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.

ಗುಂಪು ನೃತ್ಯ, ಆರ್ಟ್​, ಜಾದೂ, ಸ್ಟಂಟ್​, ಸೋಲೋ ನೃತ್ಯ ವಾದ್ಯಗಳು, ಅಥವಾ ಇತರ ಪ್ರತಿಭೆಗಳನ್ನು 5 ನಿಮಿಷದಲ್ಲಿ ಪ್ರದರ್ಶಿಸಿ ವಿಜೇತರಾದ ಮೊದಲ ಮೂವರಿಗೆ ಬಹುಮಾನ ನೀಡಲಾಗುವುದು. ವಿಧಾನಸಭೆ ೇತ್ರದಲ್ಲಿ ವಿಜೇತರಾದ 6 ಸ್ಪರ್ಧಿಗಳು ಗ್ರಾಂಡ್​ ಫಿನಾಲೆಯಲ್ಲಿ ಪಾಲ್ಗೊಳ್ಳಲಿದ್ದು, ವಿಜೇತರಾದವರಿಗೆ ಅನುಕ್ರಮವಾಗಿ 51,000 ರೂ., 31000 ರೂ., 21,000 ರೂ. ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನ ನಗದು ಹಾಗೂ ಸ್ಮರಣಲಕ ನೀಡಿ ಗೌರವಿಸಲಾಗುವುದು ಎಂದರು.

ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯ ಜಗದೀಶ ಕವಟಗಿಮಠ ಮಾತನಾಡಿದರು. ಮುಖಂಡರಾದ ದುಂಡಪ್ಪ ಬೆಂಡವಾಡೆ, ಬಸವಪ್ರಸಾದ ಜೊಲ್ಲೆ, ಪವನ ಪಾಟೀಲ, ವಿಶ್ವನಾಥ ಕಮತೆ, ಪ್ರಣವ ಮಾನವಿ, ಎಂ.ಪಿ.ಪಾಟೀಲ, ದೀಪಕ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net