

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಹೈಕೋರ್ಟ್ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಎಸ್.ಜಿ. ಪಂಡಿತ ಅವರ ನೇತೃತ್ವದಲ್ಲಿ ವಿಶೇಷ ಲೋಕ ಅದಾಲತ್ ಶನಿವಾರ ಜರುಗಿತು.
ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್, ವಿ. ಶ್ರೀಶಾನಂದ, ಸಿ.ಎಂ. ಪೂಣಚ್ಚ, ಜಿ. ಬಸವರಾಜ, ಉಮೇಶ ಎಂ. ಅಡಿಗ ಹಾಗೂ ಸದಸ್ಯರಾದ ಗೋಪಾಲ ಪಾಟೀಲ, ಸಾಜೀದ ಗೂಡವಾಲಾ, ರಾಕೇಶ ಬಿಳ್ಕಿ, ವಿ.ಪಿ. ವಡವಿ, ಸೀತಾಲಕ್ಷಿ÷್ಮÃ ಪುರ್ಲಿ ಮತ್ತು ಶೈಲಾ ಬೆಳ್ಳಿಕಟ್ಟಿ ಅವರಿದ್ದ 6 ಪೀಠಗಳಲ್ಲಿ ಲೋಕ ಅದಾಲತ್ ನಡೆಯಿತು.
ಅದಾಲತ್‌ನಲ್ಲಿ 1,274 ಪ್ರಕರಣಗಳನ್ನು ಕÊಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 173 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೈಕೋರ್ಟ್ ಕಾನೂನು ಸೇವಾ ಸಮಿತಿ ಕಾರ್ಯರ್ಶಿ ಜೆರಾ¯್ಡï ರುಡಾಲ್ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.