172 ಕೋಟಿ ರೂ. ಜೆಜೆಎಂ ಕಾಮಗಾರಿ ಪೂರ್ಣ

26NPN2-Web
ಗೊಂದುಗುಪ್ಪಿ ಗ್ರಾಮದಲ್ಲಿ ರಸ್ತೆ ಅಭಿವದ್ಧಿ ಕಾಮಗಾರಿಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು. ಬಾಜಿರಾವ ಭೋಸಲೆ, ಪಾಂಡುರಂಗ ಪಾಟೀಲ, ಅನಿತಾ ಸುತಾರ ಇತರರಿದ್ದರು.
Published on

ನಿಪ್ಪಾಣಿ: ಜಲಜೀವನ ಮಿಷನ್ ಯೋಜನೆಯಡಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ರೂ.172 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಗೊಂದುಗುಪ್ಪಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ 98.50 ಲಕ್ಷ ರೂ. ಅನುದಾನದಲ್ಲಿ 376 ಮನೆಗಳಿಗೆ ನಳಮಾಪಕ ಯಂತ್ರ ಅಳವಡಿಕೆ, ಆರ್‌ಡಿಪಿಆರ್ ಇಲಾಖೆಯಡಿ 50 ಲಕ್ಷ ರೂ.ಅನುದಾನದಲ್ಲಿ ಸಾರ್ವಜನಿಕ ಬಾವಿಯಿಂದ ಸ್ಮಶಾನ ಭೂಮಿಯವರೆಗಿನ 1.5 ಕಿಮೀ ರಸ್ತೆ ಸುಧಾರಣೆ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ 12 ಲಕ್ಷ ರೂ. ಅನುದಾನದಲ್ಲಿ ಪರಿಶಿಷ್ಟರ ಕಾಲನಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿ, ಗ್ರಾಮದಲ್ಲಿ ಇಲ್ಲಿಯವರೆಗೆ 6 ಕೋಟಿ ರೂ. ಮೊತ್ತದ ಅಭಿವದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. ಬಾಜಿರಾವ ಭೋಸಲೆ, ಪಾಂಡುರಂಗ ಪಾಟೀಲ, ಅನಿತಾ ಸುತಾರ, ಆನಂದ ಪಾಟೀಲ, ಸದಾಶಿವ ಪಾಟೀಲ, ರಘುನಾಥ ದೇಸಾಯಿ, ಪ್ರಕಾಶ ಪಾಟೀಲ, ಶಿವಾಜಿ ಪಾಟೀಲ, ಕೇಶವ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net