170 ಕಳ್ಳರನ್ನು ಜೈಲಿಗಟ್ಟಿದ ಪೊಲೀಸರು

Published on

ವಿವಿಧ ಪ್ರಕರಣದಲ್ಲಿ ದರೋಡೆ ಮಾಡಲಾಗಿದ್ದ 5.61 ಕೋಟಿ ರೂ. ಚಿನ್ನಾಭರಣ ಪತ್ತೆ

ತುಮಕೂರು: ಕಳೆದ ನಾಲ್ಕು ತಿಂಗಳಲ್ಲಿ ವಿವಿಧ ಪ್ರಕರಣದಲ್ಲಿ ದರೋಡೆ ಮಾಡಿದ್ದ 5.61 ಕೋಟಿ ರೂಪಾಯಿ ಚಿನ್ನಾಭರಣ ಪತ್ತೆ ಮಾಡಿರುವ ಜಿಲ್ಲೆಯ ಪೊಲೀಸರು, ಬರೋಬ್ಬರಿ 170 ಕಳ್ಳರನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್ಪಿ ಕೆ.ವಿ.ಅಶೋಕ್​ ಮಂಗಳವಾರ ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರಿನ ರಿಂಗ್​ ರಸ್ತೆಯಲ್ಲಿ ಟ್ರಕ್​ನಲ್ಲಿ ಮಲಗಿದ್ದವರ ಕಾಲಿಗೆ ಚುಚ್ಚಿ ದರೋಡೆ ಮಾಡಿದ್ದ ಪ್ರಕರಣ ಸೇರಿ 7 ಮನೆಗಳವು, ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿದ್ದ ತಮಿಳುನಾಡು ತಂಡ ಸೇರಿ ಎಲ್ಲ ಕಳ್ಳರನ್ನು ಜೈಲಿಗಟ್ಟಲಾಗಿದೆ ಎಂದರು. ಲಾಭಕ್ಕಾಗಿ ಕೊಲೆ ಪ್ರಕರಣ, 3 ದರೋಡೆ ಪ್ರಕರಣ, 5 ಸುಲಿಗೆ ಪ್ರಕರಣ, 21 ಸರಗಳ್ಳತನ ಪ್ರಕರಣ, 38 ಮನೆ ಕನ್ನಕಳವು, 53 ಸಾಮಾನ್ಯ ಕಳವು ಮತ್ತು 8 ಗಮನವನ್ನು ಬೇರೆಡೆ ಸೆಳೆದು ಕಳವು ಮತ್ತು 1 ಸೈಬರ್​ ಅಪರಾಧ ಪ್ರಕರಣ ಸೇರಿ ಒಟ್ಟು 130 ಪ್ರಕರಣ ಪತ್ತೆ ಮಾಡಲಾಗಿದೆ ಎಂದರು.

ಬಂಧಿತರಿಂದ 4 ಕೆಜಿ 31 ಗ್ರಾಂ ಚಿನ್ನಾಭರಣ, 7 ಕೆಜಿ 207 ಗ್ರಾಂ ಬೆಳ್ಳಿಯ ಆಭರಣ, 99 ಬೈಕ್​ಗಳು, 4 ನಾಲ್ಕು ಚಕ್ರದ ವಾಹನಗಳು, 1 ಆಟೋರಿಕ್ಷಾ, 2 ಟ್ರಾ$್ಯಕ್ಟರ್​ಗಳು, 3 ಲಕ್ಷ ಮೌಲ್ಯದ ಜಾನುವಾರುಗಳು, ಕೊಬ್ಬರಿ, ಅಡಕೆ ಸೇರಿದಂತೆ 36.73 ಲಕ್ಷದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ಗೋಪಾಲ್​, ಪುರುಷೋತ್ತಮ ಇದ್ದರು.

ವಿಧಾನ ಪರಿಷತ್​ ಸದಸ್ಯ ಆರ್​.ರಾಜೇಂದ್ರ ವಿರುದ್ಧ ಸುಾರಿ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಸಾಕ್ಷ$್ಯವಾಗಿ ನೀಡಿರುವ ಆಡಿಯೋ ಸೇರಿ ಕೆಲವು ವಸ್ತುಗಳನ್ನು ಎ್​ಎಸ್​ಎಲ್​ ಪರೀೆಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರ ತನಿಖೆ ಮುಂದುವರಿಯಲಿದೆ.| ಕೆ.ವಿ.ಅಶೋಕ್​ ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net