ಶ್ರೀದೇವಿಯರಿಗೆ 17 ಸೇವೆ ಸಮರ್ಪಣೆ

New SSK New
Published on

ಹುಬ್ಬಳ್ಳಿ : ಇಲ್ಲಿನ ದಾಜಿಬಾನಪೇಟದ ಶ್ರೀ ದುರ್ಗಾದೇವಿ ದೇವಸ್ಥಾನ ಎಸ್​ಎಸ್​ಕೆ ಪಂಚ ಟ್ರಸ್ಟ್​ನಿಂದ ಮೇ 3 ರಿಂದ 9ರವರೆಗೆ ನಡೆಯಲಿರುವ ಶ್ರೀ ಸಹಸ್ರ ಚಂಡಿಕಾಯಾಗ ಅಂಗವಾಗಿ ಸೋಮವಾರ ದೇವಸ್ಥಾನದ ಆವರಣದಲ್ಲಿ ಶ್ರೀದೇವಿಯರಿಗೆ 17 ಸೇವೆಗಳ ಸಮರ್ಪಣೆಯ ಕಾರ್ಯಕ್ರಮಗಳು ಧಾರ್ವಿುಕ ವಿಧಿ ವಿಧಾನ, ಪೂಜೆ ಪುನಸ್ಕಾರ, ಹೋಮ ಹವನಾದಿಗಳೊಂದಿಗೆ ನೆರವೇರಿತು.

ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದ್ಯಾಮವ್ವ ದೇವಿ ಹಾಗೂ ಶ್ರೀ ದುರ್ಗಾದೇವಿ ಮಾತೆಯರ ನೂತನ ಪಾದುಕೆಗಳು, ಶ್ರೀ ಬಾಲ ಮಾರುತಿ ದೇವರ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲ್ಪಟ್ಟವು. ನೂತನವಾಗಿ ಶ್ರೀ ಕೂಮಾ ದೇವರ ಮೂರ್ತಿ, ಶ್ರೀ ಗಣಪತಿ ಮೂರ್ತಿ, ಶ್ರೀ ನಾಗದೇವತೆ ಮೂರ್ತಿ, ಧ್ವಜ ಸ್ತಂಭ ಸ್ಥಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಪ್ರತಿಷ್ಠಾಂಗ ಹೋಮದೊಂದಿಗೆ ನೆರವೇರಿತು.

ಪುರೋಹಿತ ರವೀಂದ್ರ ಆಚಾರ್ಯರ ತಂಡದ ನೇತೃತ್ವದಲ್ಲಿ ಬೆಳಗ್ಗೆಯಿಂದ ಏರ್ಪಡಿಸಿದ್ದ ವಿವಿಧ ಪೂಜಾ ಕಾರ್ಯಗಳಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ಜಂಟಿ ಮುಖ್ಯ ಟ್ರಸ್ಟಿ ನೀಲಕಂಠ ಜಡಿ, ಟ್ರಸ್ಟಿ ಎನ್. ಆರ್. ಹಬೀಬ, ಉದ್ಯಮಿ ದೀಪಕ ಮಗಜಿಕೊಂಡಿ, ದಯಾನಂದ ಮಗಜಿಕೊಂಡಿ ದಂಪತಿ ಪಾಲ್ಗೊಂಡು, ಧಾರ್ವಿುಕ ವಿಧಿ ವಿಧಾನಗಳನ್ನು ಪೂರೈಸಿದರು.

ನಂತರ ದೇವಸ್ಥಾನಕ್ಕೆ 17 ಸೇವೆಗಳ ಸಮರ್ಪಣಾ ಸಮಾರಂಭವು ಸಂಸ್ಥೆಯ ಮುಖ್ಯ ಟ್ರಸ್ಟಿ ತಾರಾಸಾ ಧೋಂಗಡಿ ಅಧ್ಯಕ್ಷತೆಯಲ್ಲಿ ನೆರವೇರಿತು. ಎಸ್​ಎಸ್​ಕೆ ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ, ಮಾಜಿ ಶಾಸಕ ಅಶೋಕ ಕಾಟವೆ, ಉದ್ಯಮಿ ಆನಂದ ಕಮತಗಿ ಅತಿಥಿಗಳಾಗಿದ್ದರು.

ದೇವಸ್ಥಾನಕ್ಕೆ 17 ಸೇವೆಗಳನ್ನು ಸಮರ್ಪಿಸಿರುವ ದಾನಿಗಳನ್ನು ಹಾಗೂ ಕಲ್ಲಿನ ಮೂರ್ತಿಗಳ ಶಿಲ್ಪಿಗಳಾದ ರಾಣೆಬೆನ್ನೂರಿನ ಕಾಳಾಚಾರ್ಯ, ಹುಲುಗೂರಿನ ಚಿದಾನಂದ ಆಚಾರ್ಯ, ಬೆಳ್ಳಿ ಪಲ್ಲಕ್ಕಿಯ ಕಲಾಕಾರ ಬೆಳಗಾವಿಯ ಮಂಜುನಾಥ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಮೀರಾ ಮೆಹರವಾಡೆ, ಸತೀಶ ಮೆಹರವಾಡೆ, ವಿಷ್ಣುಸಾ ಪೂಜಾರಿ, ವಿಠ್ಠಲ ಲದವಾ, ಡಿ.ಕೆ. ಚೌಹಾಣ, ನಾಗೇಶ ಕಲಬುರ್ಗಿ, ರಂಗಾ ಬದ್ದಿ, ನಾರಾಯಣಸಾ ನಿರಂಜನ, ಅರ್ಜುನಸಾ ಪವಾರ, ಅಶೋಕ ಲದವಾ, ಎನ್.ಆರ್. ಹಬೀಬ, ಸುನಿತಾ ಬುರಬುರೆ, ಸರಸ್ವತಿ ಧೋಂಗಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net