ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ; ಕ್ರೀಡಾ ವಸತಿ ನಿಲಯದ ಕುಸ್ತಿಪಟುಗಳಿಗೆ 17 ಪದಕ

WhatsApp Image 2023-09-15 at 4.53.03 PM
Published on

ಧಾರವಾಡ: ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಶಾಲಾ ಬಾಲಕರ ಮತ್ತು ಬಾಲಕಿಯರ 14 ಮತ್ತು 17 ವಯೋಮಿತಿ ಒಳಗಿನ ಕುಸ್ತಿ ಸ್ಪರ್ಧೆಯಲ್ಲಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿನದ ಕ್ರೀಡಾ ವಸತಿ ನಿಲಯದ 18 ಕುಸ್ತಿಪಟಟುಗಳಲ್ಲಿ 9 ಕುಸ್ತಿಪಟುಗಳು ಪ್ರಥಮ ಸ್ಥಾನ ಪಡೆದ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 4 ಕುಸ್ತಿಪಟುಗಳು ದ್ವಿತೀಯ ಸ್ಥಾನ, 7 ಕುಸ್ತಿಪಟುಗಳು ತೃತೀಯ ಸ್ಥಾನ ಪಡೆದಿದ್ದಾರೆ.

ಒಟ್ಟು 17 ಪದಕ ಪಡೆದು ಜಿಲ್ಲೆ ಮತ್ತು ಕ್ರೀಡಾ ಶಾಲೆಗೆ ಕೀರ್ತಿ ತಂದ ಕುಸ್ತಿಪಟುಗಳಿಗೆ ಇಲಾಖೆಯ ಹಿರಿಯ ಕುಸ್ತಿ ತರಬೇತುದಾರ ಶಿವಪ್ಪ ಶಿ. ಪಾಟೀಲ ತರಬೇತಿ ನೀಡಿದ್ದಾರೆ.
ಅಭಿ ಕುರಬರ, ಭಜರಂಗಿ ದೊಡ್ಡಮನಿ, ಯಂಕಪ್ಪ ಕುಡಗಿ, ಪ್ರಭಾವತಿ ಲಂಗೋಟಿ, ಜಾಹ್ನವಿ ಕೆ., ಪುಷ್ಪ ನಾಯಕ ಪ್ರಥಮ ಸ್ಥಾನ ಪಡೆದಿದ್ದಾರೆ. ಶಿವಾಜಿ ಗಾಯಕವಾಡ, ದಾದಾಪೀರ ಸೈಯದ್ನವರ, ಗಂಗೋತ್ರಿ ಚವ್ಹಾನ, ಅನುಶ್ರೀ ಚೌಗಲೆ ದ್ವೀತಿಯ ಸ್ಥಾನ ಪಡೆದಿದ್ದಾರೆ. ಗಂಗಮ್ಮ ಹಡಪದ, ಸುದೀಪ ನೇಸರಗಿ, ಆಕಾಶ ಪಾಟೀಲ, ಚೇತನ ತುಕ್ಕೋಜಿ, ಅದಮï‌ಸಾಬ ಗಲಗಲಿ, ಬಾಹುಸಾಹೇಬ ಮಾನೆ, ಮಾದೇಶ ಭತ್ತೆ ತೃತೀಯ ಸ್ಥಾನ ಪಡೆದಿದ್ದಾರೆ.

ಸಾಧಕ ಕುಸ್ತಿಪಟುಗಳಿಗೆ ಮತ್ತು ತರಬೇತುದಾರರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸರಶೆಟ್ಟಿ, ತರಬೇತುದಾರ ಶಿವಪ್ಪ ಪಾಟೀಲ, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಲಿಂಗರಾಜ ಹಡಪದ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net