ಗೌಡಹಳ್ಳಿ ಸಹಕಾರ ಸಂಘಕ್ಕೆ 17 ಲಕ್ಷ ರೂ. ನಿವ್ವಳ ಲಾಭ

14 mdg p3
Published on

ಮೂಡಿಗೆರೆ: ಗೌಡಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 17.04 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.9 ರಷ್ಟು ಡಿವಿಡೆಂಟ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್‌ತಿಳಿಸಿದರು.
ಸಂಘದ ಕಚೇರಿ ಆವರಣದಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ195.92 ಲಕ್ಷ ರೂ.ಸ್ವಂತ ಬಂಡವಾಳ, 140.88 ಲಕ್ಷ ಒಟ್ಟು ಠೇವಣಿ ಸಂಗ್ರಹವಿದ್ದು, ಮುಂದಿನ ಸಾಲಿಗೆ 2 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
2023-24ನೇ ಸಾಲಿನಲ್ಲಿ ಒಟ್ಟು 1,285.88 ಲಕ್ಷ ರೂ. ಸಾಲ ವಿತರಣೆ ಮಾಡಲಾಗಿದೆ. ಇದರಲ್ಲಿ ಕೃಷಿಗಾಗಿ 1,078.85 ಲಕ್ಷ ರೂ.ಸಾಲ ನೀಡಲಾಗಿದೆ. ಶೇ. 100 ರಷ್ಟು ವಸೂಲಾತಿ ಪ್ರಗತಿ ಸಾಧಿಸಲಾಗಿದೆ ಎಂದರು.
ಸಹಕಾರ ಕ್ಷೇತ್ರದಿಂದ ರೈತರಿಗೆ ಹಲವು ರೀತಿಯ ಸೇವೆ ಒದಗಿಸುತ್ತಿದೆ. ರೈತರಿಗೆ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಸದಸ್ಯರು ಸಂಘದಲ್ಲಿ ಹೆಚ್ಚಿನ ವ್ಯವಹಾರ ಮಾಡುವ ಮೂಲಕ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಘದಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಆರ್.ರವೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಕಾಫಿ ಮಂಡಳಿ ಅಧಿಕಾರಿ ವಿಶ್ವನಾಥ್, ಉಪಾಧ್ಯಕ್ಷ ಎಚ್.ಜಿ.ವೆಂಕಟೇಶ್, ನಿರ್ದೇಶಕರಾದ ಕೆ.ಎಲ್.ಚಂದ್ರೇಗೌಡ, ಬಿ.ಬಿ.ವಿನೇಶ್, ಎಂ.ಎಸ್.ಸಂತೋಷ್, ಬಿ.ಪಿ.ಕೃಷ್ಣೇಗೌಡ, ಎಂ.ಪಿ. ಅರುಣ್, ಎಚ್.ಕೆ.ಲಿಂಗಪ್ಪ, ಜಯಮ್ಮ, ಸುಮ ರವಿಕುಮಾರ್, ಜಿ.ಟಿ.ರಮೇಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನಿತಿನ್ ಪಟೇಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net