

ಸವಣೂರ: ತಾಲೂಕಿನ ಮಾದಾಪೂರ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಹರಕುಣಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ 15 ಲ ರೂ. ಹಾಗೂ ವೈಯಕ್ತಿಕ 2 ಲ ರೂ. ಪರಿಹಾರ ನೀಡಿದರು. ಎನ್ಡಿಆರ್ಎ್ನಡಿ ತಲಾ 5 ಲ ರೂ. ವಿತರಣೆ ಆದೇಶ ಪತ್ರ ನೀಡಿದರು.
ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮುತ್ತಪ್ಪ ಹರಕುಣಿ ಹಾಗೂ ಸುನೀತಾ ಅವರ ಆರೋಗ್ಯ ವಿಚಾರಿಸಿದರು. ಮನೆ ನಿರ್ಮಾಣಕ್ಕಾಗಿ 1.20 ಲ ರೂ. ಧನಸಹಾಯದ ಆದೇಶ ಪತ್ರ ವಿತರಿಸಿ ಸಾಂತ್ವನ ಹೇಳಿದರು.
ಮಾದಾಪೂರ ಗ್ರಾಮದಲ್ಲಿ 50 ವರ್ಷಕ್ಕಿಂತ ಹಳೆಯ ಮನೆ, ವಸತಿ ಹಾಗೂ ನಿವೇಶನ ರಹಿತರ ಸರ್ವೇ ಮಾಡಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಅವಡ ಸಂಭವಿಸಿದ ತಣ ಆರೋಗ್ಯ ಸೇವೆ ನೀಡಬೇಕು. ಅವಡ ಸಂಭವಿಸಿದ ಸ್ಥಳಕ್ಕೆ ಆಗಮಿಸಲು ವಿಳಂಬ ಮಾಡಿದ ಕುರಿತು ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ಸೂಚನೆ ನೀಡಿದರು.
ಇಂತಹ ಟನೆಗಳು ಸಂಭವಿಸದಂತೆ ಮುಂಜಾಗ್ರತೆ ಕ್ರಮಗಳನ್ನು ಕೆಗೊಳ್ಳಬೇಕು. ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣ ಮೊತ್ತ ಹೆಚ್ಚಿಸಲು ಹಾಗೂ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.