16ರಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಅನ್ನದಾನ

CTD 12 IYAPPAAA--08
Published on

ಚಿತ್ರದುರ್ಗ: ನಗರದ ಮೆದೆಹಳ್ಳಿರಸ್ತೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 24 ನೇ ವರ್ಷದ ಬ್ರಹ್ಮೋತ್ಸವ ಪೂಜಾ ಕಾರ‌್ಯಕ್ರಮದ ಅಂ ಗವಾಗಿ ಮಾಲಾಧಾರಿಗಳಿಗೆ ನ.16ರಿಂದ 2024 ಜನವರಿ 13ರವರೆಗೆ ನಿತ್ಯ ಅನ್ನದಾನ ಏರ್ಪಡಿಸಲಾಗಿದೆ. ಉದ್ಯಮಿ ಟಿ.ಮಹಾಂತೇಶ್ ಅವರು 16ರಂದು ಅನ್ನದಾನ ಕಾರ‌್ಯಕ್ರಮ ಉದ್ಘಾಟಿಸುವರು. ಅಂದು ಬೆಳಗ್ಗೆ 11ಕ್ಕೆ ಗಣಹೋಮ ಸೇರಿದಂತೆ ನಾನಾ ಪೂಜಾ ವಿಧಿಗಳು ನೆರ ವೇರಲಿವೆ. ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಬಳಿಕ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವೆಂಕಟೇಶ್(9342310469)ಸಂಪರ್ಕಿಸಬಹುದು. -----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net