16ರಿಂದ ಮನೆ ಮನೆಗೆ ಶ್ರಾವಣ ಮಾಸದ ಸಂದೇಶ ಕಾರ್ಯಕ್ರಮ

Published on

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದಿಂದ ಆ.16 ರಿಂದ ಸೆಪ್ಟೆಂಬರ್15 ರವರೆಗೆ ಮನೆ ಮನೆಗೆ ಶ್ರಾವಣ ಮಾಸದ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಮ.ಗು. ಸದಾನಂದಯ್ಯ ತಿಳಿಸಿದರು.
ವಿಜಯನಗರ ನಾಲ್ಕನೇ ಹಂತದ ಟೆಂಪಲ್ ಟ್ರೀ ಅಪಾರ್ಟ್‌ಮೆಂಟ್‌ನ ಮುಕ್ತ ಎಸ್. ಪ್ರಸನ್ನಕಾಶಿ ಅವರ ನಿವಾಸದಲ್ಲಿ ಆ.16ರಂದು ಸಂಜೆ 5.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅವರು ಆಯ್ದ ವಚನಗಳ ಕಿರುಕೃತಿ ಲೋಕಾರ್ಪಣೆಗೊಳಿಸುವರು ಎಂದು ಶನಿವಾರ ಸುದ್ದಿಗೋಷಿಯಲ್ಲಿ ತಿಳಿಸಿದರು.
ಸುಮಾರು ಎರಡು ಸಾವಿರ ಪ್ರತಿಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಶರಣ ಸಂದೇಶ ಪ್ರಚಾರ ಮಾಡಲಾಗುವುದು. ಶರಣರ ತತ್ತ್ವದ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಇದಾಗಿದ್ದು, ಸೆ. 31 ರಂದು ಸಂಜೆ 5.30ಕ್ಕೆ ಕುವೆಂಪುನಗರ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಜಯಾಗೌಡ ಅವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಘಟಕವು ನಗರದ ಕಾಲೇಜು ವಿದ್ಯಾರ್ಥಿಗಳಿಗಾಗಿ ವಚನ ಸಾಹಿತ್ಯ-ಜೀವನ ಮೌಲ್ಯ ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನೂ ಆಯೋಜಿಸಿದ್ದು, ಹೆಚ್ಚಿನ ಮಾಹಿತಿಗೆ ಮೊ: 95355 00538 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪದಾಧಿಕಾರಿಗಳಾದ ಟಿ.ಎಸ್. ಕುಮಾರಸ್ವಾಮಿ, ಜಯಾಗೌಡ, ಪ್ರೊ.ಡಿ.ಎಸ್. ಸದಾಶಿವಮೂರ್ತಿ, ಡಾ.ಮುದ್ದುಮಲ್ಲೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net