

ಚಿತ್ರದುರ್ಗ: ಸಮಾಜಕ್ಕೆ ಉತ್ತಮ ಸಂದೇಶ ನೀಡ ಬೇಕೆಂಬ ಆಶಯದಿಂದಾಗಿ ಚಿತ್ರರಂಗ ಪ್ರವೇಶಿಸಿದೆ ಎಂದು ಅರಳಿದ ಹೂವುಗಳು ಸಿನಿಮಾದ ನಾ ಯಕ ನಟ,ನಿರ್ಮಾಪಕ ಕೆ.ಮಂಜುನಾಥನಾಯ್ಕ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಈ ಚಿತ್ರದಲ್ಲಿ ನಾನಾ ಸಂದೇಶ ಗಳಿವೆ.
ನಾರಿ ಶಕ್ತಿ,ಮಹಿಳಾ ಸಬಲೀಕರಣ,ಶಿಕ್ಷಣ,ಥ್ರಿಬಲ್ ರೈಡಿಂಗ್‌ನಿಂದಾಗುವ ಅನಾಹುತಗಳು,ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಯಿಂದಾಗುವ ಅಪಾಯದ ಸನ್ನಿವೇಶಗಳೂ ಇವೆ. ನನ್ನ ಮೊದಲ ಚಿತ್ರ ಸೀತಮ್ಮನ ಮಗಳು ಯಶಸ್ಸಿನ ಹಿನ್ನೆಲೆಯಲ್ಲಿ ಈ ಚಿತ್ರದಲ್ಲಿ ನಟಿಸಿ ದ್ದೇನೆ. ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಣವಾಗಿದೆ ಎಂದರು. ನಿರ್ದೇಶಕ ಪುರುಷೋತ್ತಮ್ ಮಾತನಾಡಿ ಜೂ.16ರಿಂದ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು,ಪ್ರೇಕ್ಷಕರ ಬೆಂಬಲವೇ ನಮಗೆ ಶ್ರೀರಕ್ಷೆ ಎಂದರು. ಜಿಪಂ ಮಾಜಿ ಸದಸ್ಯ ಕೆ.ರಾಜನಾಯ್ಕ,ಸಹ ನಿರ್ದೇಶಕ ದೀಪು,ನಟಿ ಧನಲಕ್ಷ್ಮೀ,ಎಂ.ಸುಮಿತ್‌ಕುಮಾರ್ ಇದ್ದರು.