

ಮೈಸೂರು: ನಗರದ ಹೊರವಲಯದ ಇಲವಾಲದ ಹತ್ತಿರದ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೆ.16ರ ಬೆಳಗ್ಗೆ 10.30ಕ್ಕೆ ‘ಸುಸ್ಥಿರ ಆದಾಯಕ್ಕಾಗಿ ತೆಂಗು ಆಧಾರಿತ ಬೆಳೆ ಪದ್ಧತಿ’ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ನುರಿತ ವಿಜ್ಞಾನಿಗಳು ಹಾಗೂ ಅನುಭವಿ ಕೃಷಿಕರು, ಗುಣಮಟ್ಟದ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟದಲ್ಲಿ ಎದುರಿಸುವ ಹಲವು ಸಮಸ್ಯೆ ಮತ್ತು ಪರಿಹಾರದ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ಇತರ ಜಿಲ್ಲೆಯ ಆಸಕ್ತ ರೈತರು ಭಾಗವಹಿಸಬಹುದು. ಮೊದಲು ಬಂದವರಿಗೆ ಆದ್ಯತೆ. ನೋಂದಣಿಗಾಗಿ ಮೊ: 81479 59226, 93419 97297 ಸಂಪರ್ಕಿಸಬಹುದು.