

ಚಿತ್ರದುರ್ಗ: ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಕೃಷಿ, ಕೈಗಾರಿಕಾ ಮೇಳ, ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಈ ಕುರಿತು ಸೆ.16ರ ಸಂಜೆ 4 ಗಂಟೆಗೆ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಶರಣಸಂಸ್ಕೃತಿ ಉತ್ಸವ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಕೃಷಿಕರು, ರೈತಪರ ಸಂಘಟನೆಗಳ ಪದಾಧಿಕಾರಿಗಳು, ವ್ಯವಸಾಯೋತ್ಪನ್ನ ವಸ್ತುಗಳ ಮಾರಾಟಗಾರರು ಸಭೆಗೆ ಆಗಮಿಸುವಂತೆ ಪಿ.ವೀರೇಂದ್ರಕುಮಾರ್ (ಮೊ.ನಂ: 9845396588) ಕೋರಿದ್ದಾರೆ.