

ಮಡಿಕೇರಿ: ನಾರಾಯಣ ಧರ್ಮ ಪರಿಪಾಲನಾ(ಎಸ್.ಎನ್.ಡಿ.ಪಿ) ಯೋಗಂ ಕೊಡಗು ಯೂನಿಯನ್ ಸಿದ್ದಾಪುರ ವತಿಯಿಂದ ಶ್ರೀ ನಾರಾಯಣ ಗುರುಗಳ ೧೬೮ನೇ ಜಯಂತಿ ಆಚರಣೆಯನ್ನು ಸೆ೧೦ರಂದು ಸಿದ್ದಾಪುರದ ನಾರಾಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯೂನಿಯನ್‌ನ ಅಧ್ಯಕ್ಷ ವಿ.ಕೆ.ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೯ ಗಂಟೆಗೆ ಗುರುಪೂಜೆ ನಡೆಯಲಿದ್ದು, ೯.೩೦ ಗಂಟೆಗೆ ಮ್ಯಾಗ್‌ಡೋರ್ ಎಸ್ಟೇಟ್‌ನ ಪ್ರಮುಖರಾದ ಟಿ.ಕೆ.ಸೋಮನ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ೧೦ ಗಂಟೆಗೆ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ವಾದ್ಯ ಮೇಳದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಪ್ಯಾಡಿಂಗ್ಟನ್ ರೆಸಾರ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎಲ್.ಪ್ರವೀಣ್ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯೂನಿಯನ್‌ನ ಕಾರ್ಯದರ್ಶಿ ಕೆ.ಪಿ.ಪ್ರೇಮಾನಂದ, ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಆರ್.ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ, ಸದಸ್ಯರಾದ ಸತೀಶ್, ಆನಂದ್ ಉಪಸ್ಥಿತರಿದ್ದರು.