ನೂತನ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನ

photo 1 (5)
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ  ಸಮುದಾಯದ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಜಿ.ಪಂ ವ್ಯಾಪ್ತಿಯ ಗ್ರಾ.ಪಂ ಹಾಗೂ ಪಿಕೆಪಿಎಸ್ ಸಹಕಾರಿ ಸಂಘಗಳಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಕಾರ್ಯಕ್ರಮವನ್ನು ರಾಹುಲ್‌ ಜಾರಕಿಹೊಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಅನೇಕ ಹಿರಿಯರು ಇದ್ದರು.
Published on

ಬೆಳಗಾವಿ: ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು.ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ  ಸಮುದಾಯದ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಜಿ.ಪಂ ವ್ಯಾಪ್ತಿಯ ಗ್ರಾ.ಪಂ ಹಾಗೂ ಪಿಕೆಪಿಎಸ್ ಸಹಕಾರಿ ಸಂಘಗಳಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಮಕನಮರಡಿ ಕ್ಷೇತ್ರದ ಜನ ಮೆಚ್ಚುವಂತ ಅಭಿವೃದ್ಧಿ ಕಾರ್ಯಯನ್ನು ತಂದೆ ಸಚಿವ ಸತೀಶ್‌ ಜಾರಕಿಹೊಳಿ ಮಾಡಿದ್ದಾರೆ.

ಚುನಾವಣೆ ವೇಳೆ ನೀವೆಲ್ಲರೂ ಕಾಂಗ್ರೆಸ್‌ ಗೆಲುವಿಗೆ ಶಕ್ತಿ ತುಂಬಿದ್ದಿರಿ, ಇದರಿಂದ  ತಂದೆ ಸತೀಶ್‌ ಜಾರಕಿಹೊಳಿ  ವರು ಸಚಿವರಾಗಿದ್ದಾರೆ ಎಂದರು. ಮತದಾರರು ತೋರಿಸಿದ ಪ್ರೀತಿಗೆ, ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಡೋಲಿ ಜಿಪಂ ವ್ಯಾಪ್ತಿಯ ಮತಗಟ್ಟೆಯಲ್ಲಿ ಕಾಂಗ್ರೆಸ್‌ಗೆ  ಬಹುಮತ ಬಂದಿರುವುದು  ತುಂಬಾ ಸಂತಸವಾಗಿದೆ. ತಳಮಟ್ಟದಿಂದ ಕಾಂಗ್ರೆಸ್‌ ಕಾರ್ಯಕರ್ತರು ಕೆಲಸ ಮಾಡಿದ್ದಿರಿ.  ನಿಮ್ಮ ಪ್ರಯತ್ನದ ಫಲವೇ ಕಾಂಗ್ರೆಸ್‌ ಗೆಲುವು ಕಂಡಿದೆ. ಮಾಜಿ ಅಧ್ಯಕ್ಷ-ಉಪಾಧ್ಯಕ್ಷರು ಮತದಾರರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಸಹಕರಿಸುವೆ ಎಂದರು.

ಈ ಸಂದರ್ಭದಲ್ಲಿ ಕಡೋಲಿ ಶ್ರೀದುರದುಂಡೀಶ್ವರ ಮಠದ ಶ್ರೀಗುರುಬಸವಲಿಂಗ ಸ್ವಾಮೀಜಿ ದಿವ್ಯಸಾನಿಧ್ಯ  ವಹಿಸಿದ್ದರು, ಅಣ್ಣು ಕಟಾಂಬಳೆ,  ಕೆಪಿಸಿಸಿ ಸದಸ್ಯರಾದ ಮಲಗೌಡ ಪಾಟೀಲ, ಚಿಕ್ಕೋಡಿ ಎಸ್ ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮ ಗುಳಿ, ಸಾಗರ ಪಿಂಗಟಿ, ಅರುಣ ಕಟಾಂಬಳೆ, ಟಿ ಎಸ್ ಪಾಟೀಲ, ಮಾರುತಿ ಸನದಿ, ಆನಂದ ಪಾಟೀಲ, ಬಸವಂತ ಮಾಯಾನಾಚೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net