ವೀರ ಸಾವರ್ಕರ್ ಸಾಹಿತ್ಯ ಕ್ರಾಂತಿಕಾರಿಯಾಗಿದೆ

VeerSavarkar National Award
ಶನಿವಾರ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾವರ್ಕರ್ ಸಾಹಿತ್ಯ ಸಂಘದ ಆಶ್ರಯಲ್ಲಿ ಆಯೋಜಿಸಲಾಗಿದ್ದ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿಯನ್ನು ಬಿ.ಪಿ.ಪ್ರೇಮಕುಮಾರ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲೇಖಕ ದು.ಗು.ಲಕ್ಷ್ಮಣ, ಡಾ.ಜಿ.ಬಿ.ಹರೀಶ, ಡಾ.ಎಸ್.ಆರ್.ಲೀಲಾ, ಹರ್ಷ ಸಮೃದ್ಧ ಇದ್ದರು.
Published on

ಬೆಂಗಳೂರು: ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಹಿಂದುತ್ವಕ್ಕಾಗಿ ದುಡಿದು, ದೇಶಕ್ಕಾಗಿ ಬಲಿದಾನ ನೀಡಿದ ಪೇಶ್ವೆಗಳು, ಅಸಂಖ್ಯಾತ ದೇಶ ಭಕ್ತರ ಕ್ರಾಂತಿಕಾರಿ ಹೋರಾಟಗಳ ಬಗ್ಗೆ ವೀರ ಸಾವರ್ಕರ್ ಅವರ ಬರವಣಿಗೆ,ಕವಿತೆಗಳಲ್ಲಿ ಎದ್ದು ಕಾಣುತ್ತದೆ ಎಂದು ಸಾವರ್ಕರ್ ಸಾಹಿತ್ಯ ಸಂಘದ ಟ್ರಸ್ಟಿ ಡಾ.ಎಸ್.ಆರ್.ಲೀಲಾ ಅವರು ಹೇಳಿದರು.
ಶನಿವಾರ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾರ್ವಕರ್ ಸಾಹಿತ್ಯ ಸಂಘ ಆಯೋಜಿಸಿದ್ದ ಮಾತು, ಮಂಥನ ಹಾಗೂ ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ-2023 ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೀರ ಸಾರ್ವಕರ್ ಅವರ ಸಮಗ್ರ ಸಾಹಿತ್ಯದ 6ನೇ ಸಂಪುಟವನ್ನು ಈಗ ಓದುಗರ ಕೈಗೆ ನೀಡಲಾಗಿದ್ದು, ಅದನ್ನು ಇಂದಿನ ಯುವ ಪೀಳಿಗೆ ಓದುವುದು ಅವಶ್ಯವಾಗಿದೆ ಎಂದರು. ಜತೆ ಶಿವಾಜಿ ಮಹಾರಾಜರು, ಪೇಶ್ವೆಗಳು, ಮೊಘಲರ ದಾಳಿ ಮುಂತಾದ ವಿಷಯಗಳು ಕುರಿತು ಡಾ.ಲೀಲಾ ಅವರು ಮಾತನಾಡಿದರು.
ಸಾವರ್ಕರ್ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಿ.ಬಿ.ಹರೀಶ ಮಾತನಾಡಿ, ವೀರ ಸಾವರ್ಕರ್ ಅವರು, ನೂರಾರು ಕವಿತೆಗಳನ್ನು ಬರೆದಿದ್ದಾರೆ. ಬ್ರಿಟಿಷರು ಅವರಿಗೆ ಕವಿತೆಗಳನ್ನು ಶಿಕ್ಷೆ ಪ್ರಮಾಣವನ್ನು ಎರಡೆರಡು ದಿನ ಹೆಚ್ಚಿಸುತ್ತಿದ್ದರು. ಭಗತಸಿಂಗ್ ಅವರ ಸಾವಿನ ಸುದ್ದಿ ಕೇಳಿದಾಗ ತುಂಬಾ ನೊಂದಿದ್ದ ಸಾವರ್ಕರ್ ಅವರು, ರತ್ನಾಗಿರಿ ಜೈಲಿನಲ್ಲಿ ಇದ್ದುಕೊಂಡೇ ಅತ್ಯಂತ ಪ್ರಖರವಾರ ಕ್ರಾಂತಿಗೀತೆಯನ್ನು ರಚಿಸಿದ್ದರು. ಆಗ ಬರೆದು, ಕಂಠಪಾಠ ಮಾಡಿ, ಕವಿತೆಗಳನ್ನು ಸಾವರ್ಕರ್ ಅವರು ಅಳಿಸಿ ಹಾಕುತ್ತಿದ್ದರು ಎಂದು ಜಿ.ಬಿ.ಹರೀಶ ಹೇಳಿದರು.
ಇದೇ ಸಂದರ್ಭದಲ್ಲಿ ಬಿ.ಪಿ.ಪ್ರೇಮಕುಮಾರ ಅವರಿಗೆ ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ-2023 ಹಾಗೂ 10 ಸಾವಿರ ನಗದು ಮತ್ತು ಪ್ರಶಸ್ತಿ ಲಕಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿದುಷಿ ಅಶಾ ಜಗದೀಶ ಮತ್ತು ಡಾ.ಪದ್ಮಿನಿ ಓಕ್ ಅವರ ತಂಡವರು ಸಾವರ್ಕರ್ ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು. ಮರಾಠಿಯಲ್ಲಿದ್ದ ದೇಶ ಭಕ್ತಿ ಗೀತೆಗಳ ಸಾರವನ್ನು ಹರ್ಷ ಸಮೃದ್ಧ ಅವರು ಸಭಿಕರಿಗೆ ತಿಳಿಸಿದರಲ್ಲದೇ, ಸಾವರ್ಕರ್ ಅವರ ಇನ್ನೂ ಅನೇಕ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯದಲ್ಲಿ ನಮ್ಮ ಸಂಘವು ತೊಡಗಿದೆ ಎಂದರು. ಕಾರ್ಯಕ್ರಮದಲ್ಲಿ ದು.ಗು.ಲಕ್ಷ್ಮಣ, ಬಿ.ಪಿ.ಪ್ರೇಮಕುಮಾರ, ಡಾ. ಜಿ.ಬಿ.ಹರೀಶ್ ಸೇರಿದಂತೆ ಅನೇಕ ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net