1,640 ಪಿಯುಸಿ ಉಪನ್ಯಾಸಕರು ಗೈರು!

29imam5-Web
ಬೆಳಗಾವಿಯಲ್ಲಿ ಶುಕ್ರವಾರ ಮೌಲ್ಯ ಮಾಪನಕ್ಕೆ ಹಾಜರಾದ ಉಪನ್ಯಾಸಕರು.
Published on

ಬೆಳಗಾವಿ: ನಗರ ವ್ಯಾಪ್ತಿಯ ಐದು ಕೇಂದ್ರಗಳಲ್ಲಿ ಶುಕ್ರವಾರ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ 600 ಉಪನ್ಯಾಸಕರು ಹಾಜರಾದರು. ಆದರೆ, ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ 1,640 ಉಪನ್ಯಾಸಕರು ಗೈರು ಉಳಿದರು.

‘ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಿಂದ ಮೌಲ್ಯಮಾಪನಕ್ಕೆ ಬರುವ ಉಪನ್ಯಾಸಕರಿಗಾಗಿ ನಗರದ ಎರಡು ಕಾಲೇಜುಗಳ ಹಾಸ್ಟೆಲ್‌ಗಳು ಮತ್ತು 10 ಲಾಡ್ಜ್‌ಗಳಲ್ಲಿ ಊಟ, ವಸತಿ ಸೌಲಭ್ಯ ಕಲ್ಪಿಸಿದ್ದೇವೆ. ಆದರೆ, ಕರೊನಾ ಆತಂಕದಿಂದ ಬೇರೆ ಜಿಲ್ಲೆಗಳ ಉಪನ್ಯಾಸಕರು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಅವರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದರು.

‘ಎಲ್ಲ ಉಪನ್ಯಾಸಕರು ಸಕಾಲಕ್ಕೆ ಕೆಲಸಕ್ಕೆ ಹಾಜರಾದರೆ, 10-12 ದಿನಗಳಲ್ಲಿ ಮೌಲ್ಯಮಾಪನ ಪೂರ್ಣಗೊಳ್ಳಲಿದೆ. ಇಲ್ಲದಿದ್ದರೆ ಪ್ರಕ್ರಿಯೆ ಒಂದಿಷ್ಟು ವಿಳಂಬವಾಗಲಿದೆ’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net