

ಕಾಗವಾಡ: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಯಾವುದೇ ಶಾಸಕ ಹಾಗೂ ಸಚಿವರು ಮಾಡದೇ ಇರುವಂತಹ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲರು ಮಾಡಿದ್ದಾರೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಯುವ ಮುಖಂಡರಾದ ಶೀತಲಗೌಡ ಪಾಟೀಲ ಹೇಳಿದರು.
ಗುರುವಾರ ಉಗಾರ ಬುದ್ರುಕ ಗ್ರಾಮದಲ್ಲಿ ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ವಿಶೇಷ ಪ್ರಯತ್ನದಿಂದ ಮಂಜೂರಾಗಿರುವ ಶಾಸಕರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ 4 ಕೋಣೆ, ಉರ್ದು ಶಾಲೆ ಒಂದು ಕೋಣೆ ಹಾಗೂ ಪರಮೇಶ್ವರವಾಡಿಯಲ್ಲಿ ಒಂದು ಕೋಣೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಚಿವರ ವಿಶೇಷ ಪ್ರಯತ್ನದಿಂದ ಕಾಗವಾಡ ಮತಕ್ಷೇತ್ರದಲ್ಲಿ ನಬಾರ್ಡ್ ಯೋಜನೆಯಡಿ ಸುಮಾರು 17.5 ಕೋಟಿ ರೂ. ವೆಚ್ಚದಲ್ಲಿ 163 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಮಂಜೂರಾತಿ ಸಿಕ್ಕಿದೆ. ಕಾಮಗಾರಿಗಳು ಪ್ರಾರಂಭಗೊಂಡಿವೆ ಎಂದರು. ತಾಪಂ ಸದಸ್ಯ ವಸಂತ ಖೋತ ಮಾತನಾಡಿದರು. ನಂತರ ಉಗಾರ ಖುರ್ದ ಪಟ್ಟಣದ ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ, ತಾಪಂ ಸದಸ್ಯ ವಸಂತ ಖೋತ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜೆ.ಎ.ಹಿರೇಮಠ, ಆರ್.ಪಿ.ಅವತಾಡೆ, ಬಿಇಒ ಆರ್.ಎಂ.ಮುಂಜೆ, ವಿನಾಯಕ ಸಿಂಧೆ, ಅಪ್ಪಾಸಾಬ ಚೌಗಲಾ, ಪ್ರಕಾಶ ಸಾಜನೆ, ಸುಭಾಷ ಕುಸನಾಳೆ, ಲಕ್ಷ್ಮಣ ಜಾಧವ, ಸಂದೀಪ ಕಾಟಕರ, ದಾದಾ ಚೌಧರಿ, ವಿಜಯ ಶಿಂಧೆ, ಸುರೇಶ ಸಮಾಜ, ಅಪ್ಪಾಸಾಬ ಸನದಿ, ಮುರಗೇಶ ಕುಂಬಾರ ಇದ್ದರು.