

ಕಲಬುರಗಿ: ಕರೊನಾ ಕಂಟಕ ಜಿಲ್ಲೆಯಲ್ಲಿ ಮುಂದುವರಿದಿದೆ. ಸೋಮವಾರ ಮತ್ತೇ 16 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಇವರೆಲ್ಲ ಮಹಾರಾಷ್ಟ್ರದಿಂದ ಬಂದು ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರಾಗಿದ್ದಾರೆ. ಅಲ್ಲದೇ ಹತ್ತು ಜನರು ಗುಣಮುಖರಾಗಿದ್ದು ಇವರನ್ನು ಮನೆಗಳಿಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಗುಣಮುಖರಾದವರೆಲ್ಲ ಮೋಮಿನಪುರ ಕಂಟೇನ್ಮೆಂಟ್ ಜೋನ್ಗೆ ಸೇರಿದವರಾಗಿದ್ದಾರೆ.
ಈ ಪ್ರಕರಣಗಳಲ್ಲಿ ನಾಲ್ವರು ಮಹಿಳೆಯರಾಗಿದ್ದು, ಹತ್ತು ಪುರುಷರು ಸೇರಿದ್ದಾರೆ. ಇವರಲ್ಲಿ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ ಇದ್ದಾರೆ. ಇವರೆಲ್ಲ ಮಹಾರಾಷ್ಟ್ರದಿಂದ ವಲಸೆ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 157 ಸೋಂಕಿತ ಪ್ರಕರಣಗಳು ಪತ್ತೆಯಾದಂತಾಗಿವೆ.
ಚಿತ್ತಾಪುರ ತಾಲೂಕಿನ ಅನಿಕೇರಾ ಕ್ವಾರಂಟೈನ್ ಕೇಂದ್ರಕ್ಕೆ ಸೇರಿದ ಕರದಳ್ಳಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ರಾಮಾನಾಯಕ್ ತಾಂಡಾದ 42 ವರ್ಷದ ಪುರುಷ (ಪಿ-2139), 18 ವರ್ಷದ ಯುವಕ(ಪಿ-2140), 35 ವರ್ಷದ ಮಹಿಳೆ(ಪಿ-2151), ಕಾಳಗಿ ತಾಲೂಖಿನ ಕೋರವಾರ ತಾಂಡಾದ 30 ವರ್ಷದ ಯುವಕ (ಪಿ-2141), ಅರಣಕಲ್ ಕೇಂದ್ರದಲ್ಲಿರುವ ಬುಗುಡಿ ತಾಂಡಾದ ಹತ್ತು ವರ್ಷದ ಬಾಲಕ (ಪಿ-2142), 55 ವರ್ಷದ ಮಹಿಳೆ (ಪಿ-2143), 45 ವರ್ಷದ ಪುರುಷ(ಪಿ-2144), 18 ವರ್ಷದ ಯುವಕ (ಪಿ-2145), 40 ವರ್ಷದ ಪುರುಷ (ಪಿ. 2146), 15 ವರ್ಷದ ಬಾಲಕಿ (ಪಿ- 2147), ಸೂಗೂರ ಕೆ ತಾಂಡಾದ 26 ವರ್ಷದ ಯುವಕ (ಪಿ-2148), ಅರಣಕಲ್ ಕೆ. ತಾಂಡಾದ 29 ವರ್ಷದ ಮಹಿಳೆ (ಪಿ- 2149), ಚಿತ್ತಾಪುರ ತಾಲೂಕಿನ ಸೂಂಗುಣಸು ತಾಂಡಾದ 68 ವರ್ಷದ ಪುರುಷ (ಪಿ-2150), ಕಮಲಾಪುರ ತಾಲೂಕಿನ ಡೊಂಗರಗಾಂವ್ ಬಳಿಯ ಭೀಮ್ಲಾ ತಾಂಡಾದ 29 ವರ್ಷದ ಪುರುಷ (ಪಿ- 2152), ಅಲ್ಲದೇ 36 ವರ್ಷದ ಪುರುಷ (ಪಿ-2178), 21 ವರ್ಷದ ಯುವತಿ (ಪಿ-2179) ಸೋಂಕಿತರಾದವರಾಗಿದ್ದು ಇವರೂ ಸಹ ಅರಣಕಲ್ ಕೇಂದ್ರದಲ್ಲಿದ್ದ ಬುಗಡಿ ತಾಂಡಾದವರಾಗಿದ್ದಾರೆ. ಇವರೆಲ್ಲರನ್ನು ಇಲ್ಲಿಯ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕರೊನಾದಿಂದ ಗುಣಮುಖರಾದ ಮೋಮಿನಪುರ ಕಂಟೇನ್ಮೆಂಟ್ ಜೋನ್ಗೆ ಸೇರಿದ 38 ವರ್ಷದ ಇಬ್ಬರು ಪುರುಷ (ಪಿ-848), (ಪಿ-849), 30 ವರ್ಷದ ಯುವತಿ (ಪಿ-953), 33 ವರ್ಷದ ಮಹಿಳೆ (ಪಿ-1080), 15 ವರ್ಷದ ಬಾಲಕಿ(ಪಿ-1081), 14 ವರ್ಷದ ಬಾಲಕಿ(ಪಿ-1082), 55 ವರ್ಷದ ಮಹಿಳೆ (ಪಿ-1083), 50 ವರ್ಷದ ಮಹಿಳೆ(ಪಿ-1085), 60 ವರ್ಷದ ಪುರುಷ (ಪಿ-1086) ಮತ್ತು ಹತ್ತು ವರ್ಷದ ಬಾಲಕಿ (ಪಿ-1087) ಗುಣಮುಖರಾಗಿದ್ದು ಮನೆಗಳಿಗೆ ಕಳಿಸಲಾಗಿದೆ.
ಇಲ್ಲಿಯವರೆಗೆ ಒಟ್ಟು 157 ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ 72 ಜನರನ್ನು ಮನೆಗಳಿಗೆ ಕಳುಹಿಸಲಾಗಿದೆ. ಏಳು ಜನ ಮೃತಪಟ್ಟಿದ್ದಾರೆ. 78 ಸಕ್ರೀಯ ಪ್ರಕರಣಗಳು ಇವೆ.
ಜಿಲ್ಲೆಯಲ್ಲಿ ಈವರೆಗೆ 6370 ಜನ ಶಂಕಿತರ ರಕ್ತ, ಗಂಟಲು ಕ ಟೆಸ್ಟ್ಗೆ ಕಳುಹಿಸಲಾಗಿದ್ದು, 6136 ಜನರ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 162 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಒಟ್ಟು 27 ಕಂಟೇನ್ಮೆಂಟ್ ಜೋನ್ಗಳಿದ್ದು ಅವುಗಳಲ್ಲಿ 21 ಸಕ್ರೀಯವಾಗಿವೆ. ಈ ಜೋನ್ಗಳಡಿ 49631 ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ.
ಪ್ರೈಮರಿ ಕಾಂಟ್ಯಾಕ್ಟ್ಸ್ 1031, ಸೆಕಂಡರಿ ಕಾಂಟ್ಯಾಕ್ಟ್ಸ್ 3359, ವಿದೇಶದಿಂದ ಬಂದವರು 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 995 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 1622 ಜನರನ್ನು ಮುಕ್ತಗೊಳಿಸಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿದ್ದ 1817 ಜನರನ್ನು ಮುಕ್ತಗೊಳಿಸಿ ಈ ನಂತರವೂ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಸ್ವಯಂ ಪ್ರೇರಣೆಯಿಂದ ವರದಿ ಮಾಡುವಂತೆ ಸೂಚಿಸಲಾಗಿದೆ. 51ಜನರನ್ನು ಇಎಸ್ಐಸಿ ಐಸೋಲೇಟೆಡ್ ವಾರ್ಡ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.