16 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

DC Office
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಇದೇ ಮೊದಲ ಬಾರಿಗೆ ಜಿಲ್ಲಾಡಳಿತವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 16 ಜನರಿಗೆ ಪ್ರಶಸ್ತಿ ಘೋಷಿಸಲಾಗಿದೆ. ನವೆಂಬರ್ 1 ರಂದು ಬೆಳಗ್ಗೆ 9 ಗಂಟೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಯು ಫಲಕ ಹಾಗೂ ಸನ್ಮಾನಕ್ಕೆ ಸೀಮಿತವಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 75 ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದವು. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಆಯ್ಕೆ ನಡೆಸಲಾಯಿತು. ಸ್ವೀಕೃತವಾದ ಅರ್ಜಿಯನ್ನೂ ಹೊರತುಪಡಿಸಿ ಇನ್ನೂ ಕೆಲವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಹಿರಿಯರಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಸಮಾಜ ಸೇವೆ ಮುಂತಾ ಕ್ಷೇತ್ರಗಳನ್ನು ಕೈಬಿಟ್ಟಿರುವ ಬಗ್ಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಂದ ಆಕ್ಷೇಪ ಕೇಳಿ ಬಂದಿದೆ.
ಪ್ರಶಸ್ತಿ ಪುರಸ್ಕೃತರು:
ಕ್ರೀಡಾ ಕ್ಷೇತ್ರದಲ್ಲಿ ಸಾಧಕ ಕುಮಟಾದ ವೆಂಕಟೇಶ ಪ್ರಭು, ಕುಸ್ತಿ ತರಬೇತುದಾರ ಹಳಿಯಾಳದ ತುಕಾರಾಮ ಮಾತ್ರು ಗೌಡ, ಕಾರವಾರದ ಅಥ್ಲೆಟಿಕ್ಸ್ ತರಬೇತುದಾರ ಪ್ರಕಾಶ ರೇವಣಕರ್, ಯಕ್ಷಗಾನ ಕ್ಷೇತ್ರದಲ್ಲಿ ಕುಮಟಾದ ಸುಕ್ರಪ್ಪ ನಾರಾಯಣಪ್ಪ ನಾಯ್ಕ, ಸಿದ್ದಾಪುರದ ಅಶೋಕ ಭಟ್ ಹೊನ್ನೆಗುಂಡಿ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಕಾರವಾರದ ಬಾಬು ಜೆ.ಅಂಬಿಗ, ಶಿರಸಿಯ ಭಾಗೀರಥಿ ಹೆಗಡೆ, ಜಾನಪದ ಕ್ಷೇತ್ರದಲ್ಲಿ ಹೊನ್ನಾವರದ ಮಂಕಿ ಬೈಲೂರಿನ ಶಾರದಾ ಮಹಾದೇವ ಮೊಗೇರ, ಶಿರಸಿಯ ಬನವಾಸಿಯ ಗುಡ್ಡಪ್ಪ ಜೋಗಿ,ರಂಗಭೂಮಿ ಕ್ಷೇತ್ರದಲ್ಲಿ ಭಟ್ಕಳದ ಅಶೋಕ ಮಂಗೇಶ ಮಹಾಲೆ, ಕಲೆಯ ಕ್ಷೇತ್ರದಲ್ಲಿ ದಾಂಡೇಲಿಯ ದುಂಡಪ್ಪ, ಮುತ್ತಣ್ಣ ಗೂಳೂರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪಿ.ಎಸ್.ಸದಾನಂದ, ವೈದ್ಯಕೀಯ ಕ್ಷೇತ್ರದಲ್ಲಿ ಕುಮಟಾದ ದಂತ ವೈದ್ಯ ದೀಪಕ ಡಿ.ನಾಯಕ, ಶಿಕ್ಷಣ ಕ್ಷೇತ್ರದಲ್ಲಿ ಅಂಕೋಲಾದ ಮಹೇಶ ರಾ ನಾಯಕ, ಅಂಕೋಲಾದ ಯು.ಎಂ.ಶಿರ್ಸಿಕರ್, ಪರಿಸರ ವಿಭಾಗದಲ್ಲಿ ಕುಮಟಾದ ಕಲ್ಲಬ್ಬೆಯ ಕುಬ್ಜ ಸಸ್ಯವನ ನಿರ್ಮಾತೃ ಎಲ್.ಆರ್.ಹೆಗಡೆ ಅವರಿಗೆ ಪ್ರಶಸ್ತಿ ಸಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net