

ಕಾರವಾರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಅಪಘಾತ ವಿಮೆಯ 15 ರೂ.ಲಕ್ಷ ಮೊತ್ತವನ್ನು ವಾರ್ಷಿಕ ಶೇ.10ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಹೊನ್ನಾವರ ನಿವಾಸಿ ನರಸಿಂಹ ಸುಬ್ಬಯ್ಯ ಶೆಟ್ಟಿ ಬೈಕ್ ಅಪಘಾತದಲ್ಲಿ ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಬೈಕ್ವೈಯಕ್ತಿಕ ಅಪಘಾತ ವಿಮೆ ಪಾವತಿಸುವಂತೆ ಸಂಬಂಧಪಟ್ಟ ಇನ್ಶುರೆನ್ಸ್ ಕಂಪನಿಗೆ ಮೃತರ ಮಕ್ಕಳಾದ ಅವರ ಮಕ್ಕಳಾದ ಧರ್ಮೇಂದ್ರ, ಲೋಕೇಶ್ ಹಾಗೂ ರೇಖಾ ಮನವಿ ಮಾಡಿದ್ದರು. ಆದರೆ, ಕಂಪನಿ ಹಣ ನೀಡದ ಕಾರಣ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
ಆಯೋಗದ ಅಧ್ಯಕ್ಷ ಡಾ.ಮಂಜುನಾಥ ಬೊಮ್ಮನಕಟ್ಟಿ, ಸದಸ್ಯೆ ನೈನಾ ಕಾಮಟೆ ವಿಮಾ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಬೇಕು. ಅಲ್ಲದೇ, ದೂರುದಾರರಿಗೆ ಪರಿಹಾರವಾಗಿ 90 ಸಾವಿರ ರೂ. ಹಾಗೂ ಖರ್ಚು, ವೆಚ್ಚಕ್ಕಾಗಿ 10 ಸಾವಿರ ರೂ.ಗಳನ್ನು ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ.
ಗ್ರಾಹಕರಿಗೆ ಕಾರು ಖರೀದಿಯ ಸಮಯದಲ್ಲಿ ವಿಮೆಯ ಹೆಸರಿನಲ್ಲಿ ಹೆಚ್ಚು ಹಣ ಪಡೆದ ಶೋ ರೂಂಗೆ 60 ಸಾವಿರ ರೂ. ದಂಡ ವಿಽಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಕೈಗಾದ ಎನ್ಪಿಸಿಐಎಲ್ ಉದ್ಯೋಗಿ ಎ. ರಾಜಸೇಖರನ್, ಹುಬ್ಬಳಿಯ ಶೋ ರೂಂ ಒಂದರಲ್ಲಿ ರೆನಾಲ್ಟ್ ಇಂಡಿಯಾ ಕಾರು ಖರೀದಿಸಿದ್ದರು. ಈ ಸಂದರ್ಭದಲ್ಲಿ ಶೋ ರೂಂನವರು ವಿಮೆಗಾಗಿ ಹೆಚ್ಚಿನ ಹಣ ಪಡೆದಿರುವುದಾಗಿ ದೂರಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗವು, ಶೋರೂಂ ಹೆಚ್ಚಿಗೆ ಪಡೆದಿದ್ದ 9,548 ರೂ.ಗಳನ್ನು ವಾರ್ಷಿಕ ಶೇ.12 ರ ಬಡ್ಡಿಯೊಂದಿಗೆ ಪಾವತಿಸಬೇಕು. 45 ಸಾವಿರ ರೂ.ಗಳನ್ನು ಗ್ರಾಹಕರಿಗೆ ಪರಿಹಾರ ನೀಡಬೇಕು. 5 ಸಾವಿರ ರೂ.ಗಳನ್ನು ಗ್ರಾಹಕರ ಕಲ್ಯಾಣ ನಿಽಗೆ ಪಾವತಿಸಬೇಕು. 10 ಸಾವಿರ ರೂ.ಗಳನ್ನು ದೂರುದಾರರಿಗೆ ಪ್ರಕರಣದ ಖರ್ಚು ವೆಚ್ಚಕ್ಕಾಗಿ ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ಸೂಚಿಸಿದೆ.