ಒಂದು ವರ್ಷದಲ್ಲಿ ಒಂದೇ ಮನೆಯ 16 ಹಸು ಕಳವು!

cow
Published on

ಕಾರ್ಕಳ: ಮಿಯ್ಯರಿನ ಕಜೆ ಎಂಬಲ್ಲಿ ಗುರುವಾರ ರಾತ್ರಿ ಕರಿಯಕಲ್ಲು ಕಜೆ ನಿವಾಸಿ ಯಶೋದಾ ಆಚಾರ್ಯ ಅವರ ಹಟ್ಟಿಯಲ್ಲಿದ್ದ ಗಬ್ಬದ ಹಸುವನ್ನು ಕಳ್ಳರು ಕದ್ದೊಯ್ದಿದ್ದು, ಒಂದು ವರ್ಷದ ಅವಧಿಯಲ್ಲಿ ಇವರ ಹಟ್ಟಿಯಿಂದ 16 ಹಸುಗಳನ್ನು ಗೋ ಕಳ್ಳರು ಕಳವುಗೈದಿದ್ದಾರೆ. ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಯಶೋದಾ ಆಚಾರ್ಯ ಕುಟುಂಬ ಈ ಘಟನೆಯಿಂದ ಕಂಗಾಲಾಗಿದೆ. ಈ ಮನೆಯ ಅನತಿ ದೂರದಲ್ಲಿರುವ ಸುಧಾಕರ ಶೆಟ್ಟಿ ಎಂಬುವರ ಮನೆಯ ಹಟ್ಟಿಯಲ್ಲಿದ್ದ ದನಗಳನ್ನೂ ಕಳ್ಳರು ಕಳವು ಮಾಡಿದ್ದಾರೆ. ಈ ಮನೆಯ ಹಟ್ಟಿಯಿಂದ ಒಂದು ವರ್ಷದ ಅವಧಿಯಲ್ಲಿ 12 ಹಸುಗಳನ್ನು ಎಳೆದೊಯ್ಯಲಾಗಿದೆ.
ಹಿಂಜಾವೇ ಮನವಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಯಲ್ಲಿದ್ದರೂ ಹಸುಗಳ ಕಳ್ಳತನ ನಡೆಯುತ್ತಲೇ ಇದೆ. ಉಡುಪಿ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡು ಹೈನುಗಾರಿಕರಿಗೆ ನ್ಯಾಯ ಒದಗಿಸಬೇಕು ಹಿಂದು ಜಾಗರಣಾ ವೇದಿಕೆ ಪ್ರಮುಖರಾದ ಗುರುಪ್ರಸಾದ್ ನಾರಾವಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net