ಧಾರವಾಡ ಜಿಲ್ಲೆಯ 16 ಸಹಕಾರಿ ಸಂಘಗಳು ನಿಷ್ಕ್ರಿಯ

Untitled
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಲ್ಲಿನ ನಿಷ್ಕ್ರಿಯ ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನಗೊಳಿಸಲು ತೀರ್ಮಾನಿಸಲಾಗಿದ್ದು, ಈ ಸಂಬ0ಧ ಆಕ್ಷೇಪಣೆ ಸಲ್ಲಿಸಲು ಇಲಾಖಾ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ನೋಂದಣಿಯಾಗಿರುವ ಬಸವ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಧಾರವಾಡ, ಪದ್ಮಶ್ರೀ ಮಹಿಳಾ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಹುಬ್ಬಳ್ಳಿ, ಶ್ರೀ ಮಂಜುನಾಥೇಶ್ವರ ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ. ಹುಬ್ಬಳ್ಳಿ, ಶ್ರೀ ರೇವಣಸಿದ್ಧೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಹುಬ್ಬಳ್ಳಿ, ಶ್ರೀ ಮಹಾಂತ ಸೌಹಾರ್ದ ಸಹಕಾರಿ ನಿ. ಹುಬ್ಬಳ್ಳಿ, ಶ್ರೀ ಶಂಕರಗೌಡ ಪಾಟೀಲ ಮುನೇನಕೊಪ್ಪ ಸೌಹಾರ್ದ ಸಹಕಾರಿ ಹುಬ್ಬಳ್ಳಿ, ದಿ ರಿಲಾಯನ್ಸ್ ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ನಿ. ಹುಬ್ಬಳ್ಳಿ, ದಿ ಸ್ನೇಹಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಕಲಘಟಗಿ, ಓಂ ಶಿವಶಕ್ತಿ ಪತ್ತಿನ ಸೌಹಾರ್ದ ಸಹಕಾರಿ ನಿ. ಧಾರವಾಡ, ರೈತಶಕ್ತಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿ. ಹುಬ್ಬಳ್ಳಿ, ನವಲಗುಂದ ತಾಲೂಕು ಸಾವಯವ ಕೃಷಿ ಸೌಹಾರ್ದ ಸಹಕಾರಿ ನಿ. ನವಲಗುಂದ, ಧಾರವಾಡ ತಾಲೂಕು ಸಾವಯವ ಕೃಷಿ ಸೌಹಾರ್ದ ಸಹಕಾರಿ ನಿ. ಧಾರವಾಡ, ಶ್ರೀ ವೇದಮಾತಾ ಸೌಹಾರ್ದ ಪತ್ತಿನ ಸಹಕಾರಿ ನಿ. ಹುಬ್ಬಳ್ಳಿ, ಕರ್ನಾಟಕ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ.ಧಾರವಾಡ, ಓಂ ಶ್ರೀ ಅತ್ರಿ ಋಷಿ ಅನಸೂಯಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಕಲಘಟಗಿ ಮತ್ತು ಟ್ರಿನಿಟಿ ಮೈನಾರಿಟಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಹುಬ್ಬಳ್ಳಿ ಸಂಘಗಳು ನಿಷ್ಕ್ರಿಯವಾಗಿವೆ.

ಈ ಸೌಹಾರ್ದ ಸಹಕಾರಿ ಸಂಘಗಳು ಉದ್ದೇಶಿತ ಕಾರ್ಯಚಟುವಟಿಕೆಯನ್ನು ಕೈಕೊಳ್ಳ್ಳುತ್ತಿಲ್ಲ. ಆಡಳಿತ ಮಂಡಳಿ ಚುನಾವಣೆ, ವಾರ್ಷಿಕ ಮಹಾಸಭೆಗಳನ್ನು ಜರುಗಿಸುವಲ್ಲಿ ಮತ್ತು ಲೆಕ್ಕಪರಿಶೋಧನೆ ಮಾಡಿಸುವಲ್ಲೂ ವಿಫಲವಾಗಿವೆ. ಅಲ್ಲದೆ ಸಹಕಾರಿಯನ್ನು ನಡೆಸಿಕೊಂಡು ಹೋಗಲು ಸದಸ್ಯರಿಗೆ ಆಸಕ್ತಿ ಇಲ್ಲದಿರುವುದರಿಂದ ಇವುಗಳನ್ನು ಸಮಾಪನೆಗೊಳಿಸಲಾಗುತ್ತದೆ ಎಂಬ ಮಾಹಿತಿಯನ್ನು ಸೌಹಾರ್ದ ಸಹಕಾರಿಗಳ ಗಮನಕ್ಕೆ ತರಲಾಗಿದೆ. ಆದ್ದರಿಂದ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರ ಅಡಿಯಲ್ಲಿ ನೋಂದಣಿಯಾದ ಸೌಹಾರ್ದ ಸಹಕಾರಿ ಸಂಘಗಳ ಕಲಂ 48(3)ರ ಅನ್ವಯ ಸಮಾಪನೆಗೊಳಿಸುವ ಮುಂಚೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳಿದ್ದರೆ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net