16.8 ಲಕ್ಷ ರೂ. ಕಾಣಿಕೆ ಸಂಗ್ರಹ

SLN
Published on

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೆರೆ ದೇವರಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದ ಹುಂಡಿ ಎಣಿಕೆ ಕಾರ್ಯ ಭಾನುವಾರ ನಡೆದಿದ್ದು, ವೇಳೆ 16.8 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ.

ತಾಲೂಕು ಆಡಳಿತ, ಮುಜರಾಯಿ ಇಲಾಖೆ ಅಧಿಕಾರಿಗಳು ಎಣಿಕೆ ಮಾಡಿದ್ದು, ಚಿತ್ರಹಳ್ಳಿಯಲ್ಲಿರುವ ದೇಗುಲದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ತಹಸೀಲ್ದಾರ್ ಬೀಬಿ ಫಾತಿಮಾ, ಅಧಿಕಾರಿಗಳಾದ ಅಶೋಕ್ ಶೇಖದರ್, ಪ್ರಸನ್ನಕುಮಾರ್, ಎಸ್.ಎಂ.ರಂಗನಾಥ್, ಎಸ್‌ಎಲ್‌ಎನ್ ಟ್ರಸ್ಟ್‌ನ ಎಚ್.ಡಿ.ರಂಗಯ್ಯ, ಖಂಜಾಚಿ ಸಣ್ಣಸಿದ್ದಪ್ಪ, ಕಾರ್ಯದರ್ಶಿ ಜಿ.ಎನ್.ಶೇಷಾದ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net