15ರಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನ

Hunasagi Taluka Kodekal Gramad Amrut Sarova
Published on

ಯಾದಗಿರಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ 86 ಅಮೃತ ಸರೋವರಗಳನ್ನು (ಕೆರೆಗಳ) ಪುನಶ್ಚೇತನ ಹಾಗೂ ಹೊಸದಾಗಿ ನಿಮರ್ಾಣ ಮಾಡಿದ್ದು, ಆ.15ರಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಜಿಪಂ ಸಿಇಒ ಗರೀಮಾ ಪನ್ವಾರ ತಿಳಿಸಿದ್ದಾರೆ.

76ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಅಮೃತ ಸರೋವರಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ. ಸಕರ್ಾರದ ಸುತ್ತೋಲೆ ಅನುಸಾರ ನರೇಗಾ ಮಿಷನ್ ಅಮೃತ ಸರೋವರ ಅಭಿಯಾನದಡಿ ಮಳೆ ನೀರನ್ನು ಸಂರಕ್ಷಿಸಿ, ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸುವ ಹಿನ್ನಲೆ ಅಳಿವಿನಂಚಿನಲ್ಲಿದ್ದ ಜಿಲ್ಲೆಯ ಶಹಾಪುರ 22, ಸುರಪೂರ 25, ಯಾದಗಿರಿ 11, ವಡಿಗೇರಾ 6, ಗುರುಮಠಕಲ್ 08 ಹಾಗೂ ಹುಣಸಗಿ 14 ಸೇರಿ ಒಟ್ಟು 86 ಗ್ರಾಮೀಣ ಪ್ರದೇಶದ ಕೆರೆ, ಕಲ್ಯಾಣಿ ಹಾಗೂ ಗೋಕಟ್ಟೆಗಳನ್ನು ಪುಶ್ಚೇತನಗೊಳಿಸಿ ಅಮೃತ ಸರೋವರಗಳಾಗಿ ನಿಮರ್ಿಸಲಾಗಿದೆ.

ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಭೂತಾಯಿಗೆ ನಮನ ಹಾಗೂ ವೀರಯೋಧರಿಗೆ ವಂದನೆ ಸಲ್ಲಿಸುವ ಉದ್ದೇಶದಿಂದ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಅವರ ಕುಟುಂಬಸ್ಥರು, ಹುತಾತ್ಮರ ಕುಟುಂಬಸ್ಥರು, ಪದ್ಮ ಪುರಸ್ಕಾರ ಪಡೆದವರು ಹಾಗೂ ಹಿರಿಯ ನಾಗರಿಕರಿಂದ ಪೂರ್ಣಗೊಂಡ ಅಮೃತ ಸರೋವರದ ಸ್ಥಳಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಗಳು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಕೆರೆ ನೀರು ಬಳಕೆದಾರರ ಸಂಘದ ಸದಸ್ಯರು ಹಾಗೂ ಶಾಲಾ ಕಾಲೇಜುಗಳ ಮಕ್ಕಳ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ಹಮ್ಮ್ಮಿಕೊಂಡು ಜಲ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಧ್ವಜಾರೋಹಣದ ಅಂಗವಾಗಿ ಗ್ರಾಮಸ್ಥರಿಗಾಗಿ ತಿರಂಗಾ ಯಾತ್ರೆ ಆಯೋಜಿಸಲಾಗುತ್ತಿದೆ. ಸಮುದಾಯದ ಜತೆ ಅಂದು ಬೆಳಗ್ಗೆ ಇಡೀ ಗ್ರಾಮವನ್ನು ಸಂಚರಿಸಿ, ಅಮೃತ ಸರೋವರ ಸ್ಥಳಗಳಲ್ಲಿ ಮುಕ್ತಾಯ ಮಾಡಿ, ಸ್ವಚ್ಛತೆಯ ಪ್ರತಿಜ್ಞೆ ಕೈಗೊಳ್ಳುವದು. ಸರೋವರ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು, ಆರೈಕೆ ಮಾಡುವುದು ಹಾಗೂ ಸುಸ್ಥಿರತೆಗಾಗಿ ಸಸಿಗಳನ್ನು ಅಳವಡಿಸಿಕೊಂಡು ಸಸಿಗಳಿಗೆ ಅವರ ಹೆಸರು ನಾಮಕರಣ ಮಾಡಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net