

ಮೈಸೂರು: ನಗರದ ಬೃಂದಾವನ ಚಿತ್ರಾಸ್ ಆಸ್ಪತ್ರೆ, ಜೆ.ಪಿ.ನಗರದ ರೋಟರಿ ಕ್ಲಬ್ ಹಾಗೂ ಸ್ನೇಹನಿಧಿ ಪತ್ತಿನ ಸಹಕಾರ ಸಂಘ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಜೂ.15ರ ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ವಿದ್ಯಾರಣ್ಯಪುರಂ ನಳಂದ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದೆ.
ರಕ್ತದೊತ್ತಡ, ಮಧುಮೇಹ, ಮೂಳೆ ಸಾಂದ್ರತೆ ಪರೀಕ್ಷೆ, ವಿಟಮಿನ್-ಡಿ ಪರೀಕ್ಷೆ ಮುಂತಾದವು ಗಳನ್ನು ನಡೆಸಲಾಗುತ್ತದೆ. ಸಮಾಲೋಚನೆ ನಂತರ ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಹೆಚ್ಚಿನ ತಪಾಸಣೆಯನ್ನೂ ಮಾಡಲಾಗುತ್ತದೆ. ವಿವಿಧ ಸಂಘ, ಸಂಸ್ಥೆಗಳು ಶಿಬಿರಕ್ಕೆ ಸಹಕಾರ ನೀಡಿವೆ.
ಮಾಹಿತಿಗಾಗಿ ದೂ.9845813929, 8197072791 ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಚಲುವಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೃಂದಾವನ ಚಿತ್ರಾಸ್ ಆಸ್ಪತ್ರೆಯ ವೈದ್ಯ ಟಿ.ಮಧುಸೂದನ, ರೋಟರಿ ಅಧ್ಯಕ್ಷ ಕೃಷ್ಣೇಅರಸ್, ಸಂಘದ ಕಾರ್ಯದರ್ಶಿ ಪ್ರಮೋದ ಇದ್ದರು.