15ರಂದು ಉದ್ಯೋಗ ಮೇಳ

Untitled---000
Published on

ಚಿತ್ರದುರ್ಗ:ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜೂ.15ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಮಿನಿ ಉದ್ಯೋಗ ಮೇಳ ಏ ರ್ಪಡಿಸಲಾಗಿದೆ. ಈ ಮೇಳದಲ್ಲಿ 8ಕ್ಕೂ ಹೆಚ್ಚಿನ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಪುರುಷ, ಮಹಿಳಾ ಅಭ್ಯರ್ಥಿಗಳನ್ನು ನೇರವಾಗಿ ನೇಮಕ ಮಾಡಿಕೊಳ್ಳಲ್ಲಿವೆ. ಎಸ್ಸೆಸ್ಸೆಲ್ಸಿ,ಪಿಯುಸಿ,ಡಿಪ್ಮೊಮಾ,ಐಟಿಐ,ಯಾವುದೇ ವಿಷಯದಲ್ಲಿ ಪ ದವಿ ಪಡೆದ 18ರಿಂದ 30 ವರ್ಷದೊಳಗಿನ ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಮೇಳಕ್ಕೆ ಹಾಜರಾಗಬಹುದು. ಹೆಚಿನ ಮಾಹಿತಿಗಾಗಿ 7022459064/8105619020/9945587060ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net