15ರಂದು ಅಕ್ಷರ ಸ್ಟಡಿ ಸರ್ಕಲ್ ಉದ್ಘಾಟನೆ: ಬಿ.ಕೆ. ಗಂಗಾಧರ್

15ರಂದು ಅಕ್ಷರ ಸ್ಟಡಿ ಸರ್ಕಲ್ ಉದ್ಘಾಟನೆ: ಬಿ.ಕೆ. ಗಂಗಾಧರ್
Published on

   ಹಾಸನ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಅಕ್ಷರ ಅಕಾಡೆಮಿ ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಇದರ ಅಂಗವಾಗಿ ಆಗಸ್ಟ್ 15ರ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಅಕ್ಷರ ಸ್ಟಡಿ ಸರ್ಕಲ್ ಉದ್ಘಾಟನೆ ಮಾಡಲಾಗುವುದು ಎಂದು ಅಕ್ಷರ ಅಕಾಡೆಮಿ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.

ಅಕ್ಷರ ಅಕಾಡೆಮಿ ಪ್ರತಿನಿತ್ಯ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉನ್ನತ ಮಟ್ಟದ ತರಬೇತಿ ನೀಡುತ್ತಿದೆ. ಅಕ್ಷರ ಅಕಾಡೆಮಿ ಪ್ರಾರಂಭವಾದಾಗಲೇ ಮಕ್ಕಳಿಗೆ ಓದಲು ಬೇಕಾಗಿರುವ ವ್ಯವಸ್ಥಿತ ಸ್ಟಡಿ ಸರ್ಕಲ್ ಪ್ರಾರಂಭಿಸಲು ಯೋಜಿಸಲಾಗಿತ್ತು. ಅದರಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸಂಜೆ 4 ಗಂಟೆಗೆ ಉತ್ತಮ ರೀತಿಯಲ್ಲಿ ವಿನ್ಯಾಸಗೊಂಡು, ಓದಲು ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿರುವ ಅಕ್ಷರ ಸ್ಟಡಿ ಸರ್ಕಲ್ ಎಂಬ ಹೆಸರಿಂದ  ಪ್ರಾರಂಭವಾಗಲು ಸಿದ್ಧವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಇತರ ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಅಕ್ಷರ ಸ್ಟಡಿ ಸರ್ಕಲ್ ಕೇಂದ್ರದಲ್ಲಿ 50 ವಿದ್ಯಾರ್ಥಿಗಳು ಮಾತ್ರ ಕುಳಿತು ಓದಬಹುದು. ಮುಂದಿನ ದಿನಗಳಲ್ಲಿ 200 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಗುರಿ ಹೊಂದಿದ್ದೇವೆ. ಇಲ್ಲಿ ವಿಶಾಲವಾಗಿ ವಿಭಾಗಗೊಂಡ ಕ್ಯಾಬಿನ್‌ಗಳು, ಉತ್ತಮ ಗಾಳಿ, ಬೆಳಕನ್ನು ಒಳಗೊಂಡ ನಿಶ್ಯಬ್ದ ವಾತಾವರಣವನ್ನು ಹೊಂದಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಇಂಟರ್ನೆಟ್ ವ್ಯವಸ್ಥೆ ಹಾಗೂ ಪ್ರತಿನಿತ್ಯ ದಿನಪತ್ರಿಕೆ, ಮ್ಯಾಕ್ಸಿನ್‌ಗಳನ್ನು ಒದಗಿಸುವ ವ್ಯವಸ್ಥೆ ಸೇರಿದಂತೆ ದಿನದ 24 ಗಂಟೆ ಅಕ್ಷರ ಸ್ಟಡಿ ಸರ್ಕಲ್ ಈ ಎಲ್ಲಾ ಸೌಲಭ್ಯಗಳೊಂದಿಗೆ ತೆರೆದಿರುತ್ತವೆ. ತಿಂಗಳ ಫೀಸ್ ಮಾಡಲಾಗಿದ್ದು, ಅಕ್ಷರ ಅಕಾಡೆಮಿ ವಿದ್ಯಾರ್ಥಿಗಳಿಗೆ ಕಡಿಮೆ ಫೀಸ್ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಕ್ಷರ ಅಕಾಡೆಮಿಯ ಶ್ರೀನಾಥ್, ಕಾರ್ತಿಕ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net