15ರಂದು ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಣೆ

CTD 9 SEVALAL-05
Published on

ಚಿತ್ರದುರ್ಗ: ಸಂತ ಶ್ರೀ ಸೇವಾಲಾಲ್ ಅವರ ಜಯಂತಿಯನ್ನು ಫೆ.15ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಣೆ ಪೂರ್ವಭಾ ವಿ ಸಭೆಯಲ್ಲಿ ಮಾತನಾಡಿ,ಸಮಾಜದ ಮುಖಂಡರ ಸಮ್ಮತಿಯಂತೆ ಅಂದು ಬೆಳೆಗ್ಗೆ 11 ಗಂಟೆಗೆ ಡಿಸಿ ಕಚೇರಿಯಲ್ಲಿ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಗುವುದು.

ಕಾರ‌್ಯಕ್ರಮದ ಅಂಗವಾಗಿ ಗೀತಗಾಯನ,ಸೇವಾಲಾಲ್ ಅವರ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವ ಹಿಸಿ ಜಯಂತಿ ಯಶಸ್ವಿಗೊಳಿಸೋಣ ಎಂದರು. ಕಾರ‌್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಿ,ಪ್ರೋತ್ಸಾಹಧನ ನೀಡ ಬೇಕೆಂದು ಮುಖಂಡರು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ,ಎಎಸ್ಪಿ ಕುಮಾರಸ್ವಾಮಿ,ಜಿಲ್ಲಾ ಬಂಜಾರ ಸಂಘ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ,ಗೌರವಾಧ್ಯಕ್ಷ ಜಿ.ರಾಜನಾಯ್ಕ,ಪ್ರಧಾನ ಕಾರ‌್ಯದರ್ಶಿ ಕೆ.ಮಂಜುನಾಥ್‌ನಾಯ್ಕ, ಮುಖಂಡರಾದ ನರೇನ ಹಳ್ಳಿ ಅರುಣ್‌ಕುಮಾರ್,ಪ್ರಕಾಶ್ ರಾಮನಾಯ್ಕ,ಎಸ್.ಹಾಲನಾಯ್ಕ,ರಮೇಶ್,ವೀಣಾಬಾಯಿ,ವಸಂತನಾಯ್ಕ,ಶೀಲಾ ಶ್ರೀನಿವಾಸ್, ಗಣೇಶ್‌ನಾಯ್ಕ ಹಾಗೂ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net