ಶ್ರೀ ಚರಣ್ ಸೌಹಾರ್ದ ಬ್ಯಾಂಕ್‌ಗೆ 159.30 ಲಕ್ಷ ರೂ. ನಿವ್ವಳ ಲಾಭ

charan new
Published on

ಬೆಂಗಳೂರು: ಶ್ರೀ ಚರಣ್ ಸೌಹಾರ್ದ ಸಹಕಾರ ಬ್ಯಾಂಕ್ 2019-20ನೇ ಹಣಕಾಸು ಸಾಲಿನಲ್ಲಿ 159.30 ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದೆ.

ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ದ್ವಾರಕನಾಥ್ ಮಾತನಾಡಿ, 2020ರ ಮಾರ್ಚ್ ಅಂತ್ಯಕ್ಕೆ ಷೇರು ಬಂಡವಾಳದೊಂದಿಗೆ 4459.65 ಲಕ್ಷ ರೂ. ಗಳ ಸ್ವಂತ ನಿಧಿಯನ್ನು ಕ್ರೋಡಿಕರಿಸಿದೆ. 72,417.26 ಲಕ್ಷ ರೂ.ನಷ್ಟು ದುಡಿಯುವ ಬಂಡವಾಳದೊಂದಿಗೆ ಪ್ರಗತಿಯತ್ತ ಸಾಗಿದೆ ಎಂದರು.

ವಿಶ್ವದಾದ್ಯಂತ ಕರೊನಾದಿಂದ ತೀವ್ರ ಸಂಕಷ್ಟ ಎದುರಾಗಿದ್ದು, ಆರ್ಥಿಕ ಕ್ಷೇತ್ರದಲ್ಲಿ ಭಾರಿ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಬ್ಯಾಂಕ್ ನಿವ್ವಳ ಲಾಭ ಗಳಿಸಿರುವುದು ಸಂತಷವಾಗಿದೆ. ಬ್ಯಾಂಕು ತನ್ನ 10 ಶಾಖೆಗಳಲ್ಲಿ ಷೇರು ಬಂಡವಾಳ, ಠೇವಣಿ ಸಂಗ್ರಹ, ಸದಸ್ಯರಿಗೆ ಸಮಗ್ರ ಸಾಲ ವಿತರಣೆ ಮತ್ತು ಹೂಡಿಕೆಗಳ ನಿರ್ವಹಣೆ ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ(ಆರ್‌ಬಿಐ) ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.

ಬ್ಯಾಂಕಿನ ಸಾಧನೆಗೆ ಕಾರಣರಾಗಿರುವ ಗ್ರಾಹಕರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ದ್ವಾರಕನಾಥ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net