

ವಿಜಯಪುರ : ನಗರದ ಬಿಎಲ್ಡಿಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಯಾಂಪಸ್ ಸಂದರ್ಶನದಲ್ಲಿ 156 ಜನರು ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾದರು.
ಬೆಂಗಳೂರಿನ ಕಿಲೋರ್ಸ್ಕರ್ ಟೊಯೊಟಾ ಟೆಕ್ಸಟೈಲ್ಸ್ ಮಷಿನರಿ ಪೆ.ಲಿ. (ಕೆಟಿಟಿಎಂ) ಕಂಪನಿಯವರು ಕ್ಯಾಂಪಸ್ ಸಂದರ್ಶನ ನಡೆಸಿದರು. ಜಿಲ್ಲೆಯ ವಿವಿಧ ಐಟಿಐ ಕಾಲೇಜುಗಳಿಂದ ಸುಮಾರು 172 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಕೆಟಿಟಿಎಂ ಕಂಪನಿಯ ಎಚ್ಆರ್ ವಿಭಾಗದ ಮುಖ್ಯಸ್ಥ ಮನೋಜಕುಮಾರ ಮತ್ತು ಸುಮಂತ ಅಭ್ಯರ್ಥಿಗಳಿಗೆ ಲಿಖಿತ ಪರೀೆ ಹಾಗೂ ಮೌಖಿಕ ಸಂದರ್ಶನ ನಡೆಸುವ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.
ಬಿಎಲ್ಡಿಇ ಐಟಿಐ ಕಾಲೇಜಿನಿಂದ 60 ಜನ ತರಬೇತಿದಾರರು ಕಂಪೆನಿಯ ಅಪ್ರೆಂಟಿಸ್ ತರಬೇಕಿಗೆ ಆಯ್ಕೆಗೊಂಡರು. ಒಂದು ವರ್ಷದ ಈ ಅವಧಿಯಲ್ಲಿ ಅಭ್ಯರ್ಥಿಗಳು ತರಬೇತಿಯ ಜತೆಗೆ 18,000 ಸಾವಿರರಿಂದ 22,000 ಸಾವಿರ ರೂಗಳವರೆಗೆ ಸ್ಟೆಫಂಡ್ ಪಡೆಯಲಿದ್ದಾರೆ. ಅಲ್ಲದೆ, ಅಪ್ರೆಂಟಿಸ್ ಬಳಿಕ ಅದೇ ಕಂಪನಿಯಲ್ಲಿ ಮುಂದುವರೆಯುವ ನಿರೀೆ ಇದೆ.
ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ಅಧ್ಯ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಸಂತಸ ವ್ಯಕ್ತಪಡಿಸಿ ಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಎಂ.ಡಿ. ಪಡಸಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.