

ಚಿತ್ರದುರ್ಗ: ಮಳೆಯಿಂದ ಹಾನಿಗೆ ಒಳಗಾದ ನಗರದ ಕೆಳಗೋಟೆ ಪ್ರದೇಶಗಳಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ,ಶಾಸಕ ಕೆ.ಸಿ.ವಿರೇಂದ್ರ ಪ ಪ್ಪಿ,ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹಾಗೂ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲ ನೆ ನಡೆಸಿದರು.
ಮಳೆಯಿಂದಾಗಿ ಮರಗಳು ಮನೆಗಳ ಮೇಲೆ ಬಿದ್ದು ಹಾನಿ ಉಂಟಾಗುತ್ತಿದೆ. ಇಂತಹ ಮರಗಳನ್ನು ಗುರುತಿಸಿ,ಅರಣ್ಯಇಲಾಖೆ ನೆರವಿ ನೊಂದಿಗೆ ಅವುಗಳನ್ನು ತೆರವುಗೊಳಿಸಬೇಕು. ಮರ ಬಿದ್ದು ಹಾನಿಗೆ ಒಳಗಾದ ಮನೆಗಳಿಗೆ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ನಾರಾಯಣಸ್ವಾಮಿ,ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ತಹಸೀಲ್ದಾರ್ ಡಾ.ನಾಗವೇಣಿ,ನಗರಸಭೆ ಇಂಜಿನಿಯರ್‌ಗಳಾದ ಜೆ.ಜಾಫ ರ್,ಕಿರಣ್ ಇತರರು ಇದ್ದರು.
ದೇವಸಮುದ್ರದಲ್ಲಿ 34.2 ಮಿ.ಮೀ.ಮಳೆ
ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದಲ್ಲಿ 34.4 ಮಿ.ಮೀ ಮಳೆಯಾಗಿದ್ದು,ಇದು ಜಿಲ್ಲೆಯಲ್ಲಿ ಗುರುವಾರ ಸುರಿದ ಅಧಿಕ ಮಳೆಯಾಗಿದೆ. ಮೊಳಕಾಲ್ಮೂರು ತಾಲೂಕು ರಾಯಾಪುರದಲ್ಲಿ 1.3 ಮಿ.ಮೀ.,ಬಿಜಿಕೆರೆ 4.2 ಮಿ.ಮೀ.,ರಾಂಪುರ 26.1 ಮಿ.ಮೀ. ಚಳ್ಳಕೆರೆ ತಾಲೂಕು ನಾಯಕನಹಟ್ಟಿ 2.8 ಮಿ.ಮೀ.,ಪರಶುರಾಂಪುರ 16.4 ಮಿ.ಮೀ.,ಡಿ ಮರಿಕುಂಟೆ 22.4 ಮಿ.ಮೀ. ಹಿರಿಯೂರು 20 ಮಿ.ಮೀ.,ಈಶ್ವರಗೆರೆ 1.2 ಮಿ.ಮೀ.,ಸುಗೂರು 25.4 ಮಿ.ಮೀ. ಹಾಗೂ ಬಬ್ಬೂರಿನಲ್ಲಿ 13 ಮಿ.ಮೀ ಮಳೆಯಾಗಿದೆ.
ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗ ಬಾರದು
ಜಿಲ್ಲೆಯಲ್ಲಿ ರಸಗೊಬ್ಬರ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಸರಬರಾಜು ಮಾಡ ಬೇಕೆಂದು ಡಿಸಿ ಹೇಳಿದರು. ಡಿಸಿ ಕಚೇರಿಯಲ್ಲಿ ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿತ್ತನೆ ಬೀಜ,ರಸಗೊಬ್ಬರ,ಕಂಪನಿಗಳ ಪ್ರತಿನಿಧಿಗಳು,ವಿತರಕರೊಂದಿಗೆ ಸಭೆ ನಡೆಸಿದ ಅವರು,ಮೇ ಲು ಗೊಬ್ಬರ ಯೂರಿಯಾ ರಸಗೊಬ್ಬರ ಬೇಡಿಕೆಗೆ ಅನುಗುಣವಾಗಿ ಸರಬರಾಜು ಆಗಬೇಕು. ಕೃಷಿ ಪರಿಕರ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಬೇರೆ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಲಿಂಕ್ ಮಾಡದೇ ರೈತರಿಗೆ ಪರಿಕರಗಳನ್ನು ಮಾರಾಟ ಬೇಕೆಂದರು. ಜಂಟಿ ಕೃಷಿ ನಿರ್ದೇಶಕ ಡಾ. ರಮೇಶ್‌ಕುಮಾರ್ ಮಾತನಾಡಿ,ಇಲಾಖೆಯಿಂದ ಕೈಗೊಂಡಿರುವ ಅಗತ್ಯ ಸಿದ್ಧತೆಗ ಳನ್ನು ವಿವರಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕರಾದ ಪ್ರಭಾಕರ್,ಶಿವಕುಮಾರ್,ವಿಚಕ್ಷಣದ ದಳದ ಲೋಕೇಶ್ ಮತ್ತಿತರರು ಇದ್ದ ರು.