1,531 ಕೆಜಿ ನಿಷೇಧಿತ ಪ್ಲಾಸಿಕ್ ವಶ; ಪಾಲಿಕೆ ಸಿಬ್ಬಂದಿಯಿಂದ 145 ಕಡೆ ದಾಳಿ

mysore
Published on

ಮೈಸೂರು: ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಜಪ್ತಿ ಕಾರ್ಯಾಚರಣೆಯನ್ನು ಮೈಸೂರು ಮಹಾನಗರ ಪಾಲಿಕೆ ಮುಂದುವರಿಸಿದ್ದು, ಗುರುವಾರ 145 ಕಡೆ ದಾಳಿ ಮಾಡಿ 1,531 ಕೆಜಿ ತೂಕದ ಪ್ಲಾಸ್ಟಿಕ್ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು, ಇವುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ 1.61 ಲಕ್ಷ ರೂ. ದಂಡ ವಿಧಿಸಿದೆ.


ಸಂತೇಪೇಟೆಯ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿರುವ ಪಾಲಿಕೆ ಸಿಬ್ಬಂದಿ, 1,400 ಕೆಜಿ ಪ್ಲಾಸ್ಟಿಕ್‌ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದಂತೆ ಇಟ್ಟಿಗೆಗೂಡಿನಲ್ಲಿ 20, ಕುವೆಂಪುನಗರ,

ವಿಶ್ವೇಶ್ವರನಗರದಲ್ಲಿ 8, ಸರಸ್ವತಿಪುರಂ, ರಾಮಕೃಷ್ಣನಗರದಲ್ಲಿ 15, ಗೋಕುಲಂನಲ್ಲಿ 4, ಹೆಬ್ಬಾಳದಲ್ಲಿ 11, ಎಸ್‌ಎಸ್ ನಗರ, ಬನ್ನಿಮಂಟಪದಲ್ಲಿ 48, ಶಾಂತಿನಗರ, ಸುಲ್ತಾನ್ ರಸ್ತೆಯಲ್ಲಿ 6, ಗೌಸಿಯಾನಗರ, ಗಾಯತ್ರಿಪುರಂ, ಮಹದೇವಪುರ ಮುಖ್ಯರಸ್ತೆ, ರಾಜಕುಮಾರ್ ರಸ್ತೆಯಲ್ಲಿ 19 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪಾಲಿಕೆ ಆಯುಕ್ತೆ ಮಧು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಾಲಿಕೆ, ವಲಯ ಕಚೇರಿಯ ವಿವಿಧ ಸಿಬ್ಬಂದಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net