೧೫೦ ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ

7adarshkdga2
Published on

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಕಾಲೇಜು ಆವರಣದಲ್ಲಿ ಇತ್ತೀಚೆಗೆ ನಡೆಯಿತು.


ಪದವಿ ಪ್ರದಾನ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಉಪ ಕುಲಪತಿ ಡಾ.ಎಂ.ಕೆ.ರಮೇಶ್ ಮಾತನಾಡಿ, ಪ್ರಕೃತಿ ಸೊಭಗಿನ ಬೆಟ್ಟಗುಡ್ಡಗಳ ಮದ್ಯೆ ಸ್ಥಾಪಿತವಾದ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವೈದ್ಯರಾಗಿರುವುದನ್ನು ಸ್ಮರಿಸಿದರು. ಕೊರ್ಸ್‌ಗಳಲ್ಲಿ ಅತ್ಯಂತ ಕ್ಲಿಷ್ಟಕರವಾದ ಕೋರ್ಸ್ ಎಂಬಿಬಿಎಸ್ ಕೋರ್ಸ್ ಆಗಿದೆ. ಪ್ರಸ್ತುತ ಕೋರ್ಸ್‌ನ ಅವಧಿ ದೊಡ್ಡಾದಾಗಿದೆ ಎಂದರು.


ರೋಗಿಗಳು ಇಲ್ಲದೆ ನಿಮಗೆ ವೈದ್ಯರಾಗಲು ಸಾಧ್ಯವಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮುಗುಳುನಗೆಯಲ್ಲಿ ಸ್ಟೆತೊಸ್ಕೋಪ್ ಇಟ್ಟು ನೋಡಿದಲ್ಲಿ ಮಾತ್ರ ರೋಗಿಯು ಸಂತೃಪ್ತಿಯಿಂದ ಗುಣಮುಖರಾಗುತ್ತಾರೆ. ವೈದ್ಯರಲ್ಲಿ ವಾಕ್ ಸಾಮಾರ್ಥ್ಯ ಚೆನ್ನಾಗಿದ್ದವರು ಮಾತ್ರ ಸಾಧನೆಯನ್ನು ತೋರುತ್ತಾರೆ. ತಕ್ಷಣಕ್ಕೆ ದುಡ್ಡು ಮಾಡಬೇಕೆಂಬ ಉದ್ದೇಶ ಇರುವವರು ವೈದ್ಯ ಕ್ಷೇತ್ರಕ್ಕೆ ಬಾರದೇ ವ್ಯವಹಾರ ಕ್ಷೇತ್ರಕ್ಕೆ ತೆರಳಬೇಕೆಂದ ಅವರು, ಭಾರತ ದೇಶ ಯುವಜನರ ಕಣಜವಾಗಿ ಮಾರ್ಪಾಡಾಗುತ್ತಿದ ಎಂದರು.


ಪದ್ಮಶ್ರೀ ಪುರಸ್ಕೃತೆ ಡಾ.ಮಾತ ಬಿ.ಮಂಜಮ್ಮ ಜೋಗತ್ತಿ ಮಾತನಾಡಿ, ನಾನು ೯೦ ದಶಕದಲ್ಲಿ ಕಲಾವಿದೆಯಾಗಿ ಮಡಿಕೇರಿ ನಗರದ ಬೀದಿಯಲ್ಲಿ ನೃತ್ಯ ಮಾಡಿ ಬಂದಿದೆ. ಈಗಾ ಅತಿಥಿಯಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಮೊದಲ ಬಾರಿಗೆ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾ ಕಷ್ಟಪಟ್ಟು ನಿಮ್ಮ ತಂದೆ ತಾಯಿಯವರು ವೈದ್ಯರಾಗಿ ಮಾಡಿ ತಂದೆ ತಾಯಿಯ ಆಸೆಯನ್ನು ಪೂರೈಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ.ಎಂ.ಕೆ.ರಮೇಶ್, ಡಾ.ಮಾತ ಬಿ.ಮಂಜಮ್ಮ ಜೋಗತ್ತಿರವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ.ಕೆ.ಬಿ.ಕಾರ್ಯಪ್ಪ, ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎ.ಎಲ್.ಸ್ವಾಮಿ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಜಯಲಕ್ಷ್ಮಿ ಪಾಟ್ಕರ್, ಎಂ.ಎ.ನಿರಂಜನ್ ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ಈ ಬಾರಿ ೧೫೦ ವೈದ್ಯ ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮಿ ಪದವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net