15 ಸಾವಿರ ರೂ.ಮಾಸಿಕ ವೇತನ ಕೊಡಿ

08ydg04
Published on


ಯಾದಗಿರಿ: ಚುನಾವಣಾ ಪೂರ್ವದ ಭರವಸೆಯಂತೆ ರಾಜ್ಯ ಕಾಂಗ್ರೆಸ್ ಸಕರ್ಾರ ಅಂಗನವಾಡಿ ನೌಕರರ ಗೌರವಧನ 15 ಸಾವಿರ ರೂ.ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನರ್ಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದಿಂದ ಶುಕ್ರವಾರ ನಗರದ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.


ಸಂಘದ ರಾಜ್ಯ ಕಾರ್ಯದಶರ್ಿ ಎಂ.ಉಮಾದೇವಿ ಮಾತನಾಡಿ, ಸುಮಾರು ಐದು ದಶಕಗಳಿಂದ ರಾಜ್ಯದ ಬಡಜನರ ನಡುವೆ ಅಮೂಲ್ಯ ಸೇವೆ ಮಾಡುತ್ತಿರುವ ಅಂಗನವಾಡಿ ನೌಕರರ ಕುರಿತು ಸಕರ್ಾರ ನೀಡಿರುವ ಗೌರವಧನ ಹೆಚ್ಚಳ ಭರವಸೆಯನ್ನು ಈಡೇರಿಸಬೇಕಿದೆ. ಕಾರ್ಯಕತರ್ೆಯರು ಮತ್ತು ಸಹಾಯಕಿಯರು ಸಕರ್ಾರದ ಸಿ. ಮತ್ತು ಡಿ.ಗ್ರೂಪ್ ನೌಕರರ ಸರಿಸಮ ಸ್ಥಾನಮಾನದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರನ್ನು ಸಕರ್ಾರಿ ನೌಕರರೆಂದು ಪರಿಗಣಿಸದೆ ಗೌರವಧನದ ಕಾರ್ಯಕತರ್ೆಯರು ಎಂದು ಪರಿಗಣಿಸಿದೆ ಎಂದು ಆರೋಪಿಸಿದರು.

ಇದರಿಂದ ಜೀವನ ಯೋಗ್ಯ ಮಾಸಿಕ ವೇತನ, ವಿಶ್ರಾಂತಿ ಜೀವನ ನಡೆಸುವಷ್ಟು ಪಿಂಚಣಿ ಸಹಿತ ಯಾವ ಸೌಕರ್ಯಗಳೂ ಸಿಗುತ್ತಿಲ್ಲ. ಯೋಜನೆ ಆರಂಭವಾಗಿ 47 ವರ್ಷ ಕಳೆದರೂ ಅತ್ಯಂತ ಕಡಿಮೆ ಗೌರವಧನದಲ್ಲೇ ದುಡಿಯುವಂತಾಗಿದೆ. ಪ್ರತಿನಿತ್ಯವೂ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಕೇಂದ್ರ ಹಾಗೂ ರಾಜ್ಯ ಸಕರ್ಾರಗಳೆರಡೂ ಸೇರಿ ಈಗ ನೀಡುತ್ತಿರುವ ಅತ್ಯಲ್ಪ ಗೌರವಧನವು ಈ ನೌಕರರ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದರು.

ಹೀಗಾಗಿ ರಾಜ್ಯ ಸಕರ್ಾರ ಅಂಗನವಾಡಿ ಕಾರ್ಯಕತರ್ೆಯರನ್ನು ಸಿ ಮತ್ತು ಡಿ ದಜರ್ೆಯ ನೌಕರರೆಂದು ಘೋಸಬೇಕು. ಇಲ್ಲ, ಈ ದಜರ್ೆಯ ಸಕರ್ಾರಿ ನೌಕರರ ಸರಿಸಮನಾಗಿ ವೇತನ ನೀಡಬೇಕು. ಇಲ್ಲದಿದ್ದರೆ, ಭಾರತ ರಾಷ್ಟ್ರೀಯ ಕಾಮರ್ಿಕ ಸಮ್ಮೇಳನ (ಐಎಲ್ಸಿ) ಶಿಫಾರಸಿನಂತೆ ಇವರನ್ನು ಕಾಮರ್ಿಕರು ಎಂದು ಪರಿಗಣಿಸಿ ಕನಿಷ್ಟ ವೇತನ, ಇಪಿಎಫ್, ಇಎಸ್ಐ ಸಹಿತ ಕಾಮರ್ಿಕರಿಗೆ ಶಾಸನ ಬದ್ಧವಾಗಿ ಇರುವ ಎಲ್ಲ ಸೌಕರ್ಯ ನೀಡಬೇಕು ಎಂದು ಒತ್ತಾಯಿಸಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದಶರ್ಿ ರಾಮಲಿಂಗಪ್ಪ ಬಿ.ಎನ್., ಜಿಲ್ಲಾ ಕಾರ್ಯದಶರ್ಿ ರೇಣುಕಾ ಪಾಟೀಲ್, ಶಾರದಾದೇವಿ, ಮಮತಾ, ನಿರ್ಮಲಾ, ಶೈಲಜಾ, ಗೌರಮ್ಮ, ಶ್ರೀದೇವಿ, ಯಲಿಜಾ, ಇಂದ್ರಮ್ಮ, ಪ್ರತಿಮಾದೇವಿ, ಬಸ್ಸಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net