

ಕಲಬುರಗಿ: ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ೧೫ ವರ್ಷದ ಅಪ್ರಾಪ್ತ ಬಾಲಕಿ ಮೇಲೆ ವೃದ್ಧನೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಅದೇ ಗ್ರಾಮದ ವೃದ್ಧ ಗೋರಖನಾಥ ಚವ್ಹಾಣ್ ಅತ್ಯಾಚಾರ ಎಸಗಿದ ಆರೋಪಿ. ಎಂಟನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕಿಯೂ ಅಜ್ಜ, ಅಜ್ಜಿ (ತಾಯಿಯ ತಂದೆ, ತಾಯಿ) ಜತೆ ಗ್ರಾಮದಲ್ಲಿ ವಾಸಿಸುತ್ತಿದ್ದಾಳೆ. ಬಾಲಕಿಯ ತಂದೆ, ತಾಯಿ ಮುಂಬೈನಲ್ಲಿ ಕೆಲಸಕ್ಕಿದ್ದಾರೆ. ಕಳೆದ ಹಲವು ತಿಂಗಳಿAದ ಆರೋಪಿಯೂ ಬಾಲಕಿಯ ಜತೆಗೆ ಸಲುಗೆಯಿಂದ ವರ್ತಿಸುವುದು, ಮೈ, ಕೈ ಮುಟ್ಟುವುದು ಮಾಡುತ್ತಿದ್ದ. ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಆ.೧೧ರಂದು ಭಾನುವಾರವಾದ್ದರಿಂದ ಬಾಲಕಿ ಮನೆಯಲ್ಲಿದ್ದು, ಅಜ್ಜ, ಅಜ್ಜಿ ಹೊರಗಡೆ ಹೋಗಿದ್ದಾರೆ. ಈ ವೇಳೆ ಮನೆಗೆ ಬಂದ ಆರೋಪಿಯೂ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರು ಹೇಳಿದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಒಡ್ಡಿ, ಯಾರೂ ಇಲ್ಲದ ವೇಳೆ ಎರಡ್ಮೂರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ತಾಯಿ ನರೋಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.