15 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ

Oplus_131072
Oplus_131072
Published on

ಕಾಗವಾಡ: ಪ್ರಸಕ್ತ ಸಾಲಿನಲ್ಲಿ 15 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ. ರೈತರು ನಮ್ಮ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ಪೂರೈಸುವ ಮೂಲಕ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಗೊಳಿಸಬೇಕೆಂದು ಅಥಣಿ ಶುಗರ್ಸ್ ಕಾರ್ಖಾನೆ ಅಧ್ಯಕ್ಷ ಶ್ರೀಮಂತ ಪಾಟೀಲ ಹೇಳಿದರು.

ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್ ಕಾರ್ಖಾನೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಂಕೇತಿಕವಾಗಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲಾಗಿದೆ. ಸರ್ಕಾರದ ಆದೇಶದ ಬಳಿಕ ಪೂರ್ಣ ಪ್ರಮಾಣದಲ್ಲಿ ಹಂಗಾಮ ಆರಂಭವಾಗಲಿದ್ದು, ನಿತ್ಯ 12-15 ಸಾವಿರ ಟನ್ ಕಬ್ಬು ನುರಿಸುವ ಗುರಿ ಇದೆ. ರೈತರು ಗೊಂದಲಕ್ಕೆ ಒಳಗಾಗದೆ ವ್ಯವಸ್ಥಿತವಾಗಿ ಕಬ್ಬು ಪೂರೈಸಬೇಕು ಎಂದು ಮನವಿ ಮಾಡಿದರು.

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ, ನಿರ್ದೇಶಕರಾದ ಸುಶಾಂತ ಪಾಟೀಲ, ಯೋಗೇಶ ಪಾಟೀಲ, ಜನರಲ್ ಮ್ಯಾನೇಜರ್ ಆರ್.ಎ.ಲಟಕೆ, ಮುಖ್ಯ ಕೃಷಿ ಅಧಿಕಾರಿ ಬಂಡು ಜಗತಾಪ, ಮುಖ್ಯ ಇಂಜನಿಯರ್ ಚಂದ್ರಕಾಂತ ಪಾಟೀಲ, ಸೂರಜ್ ಪಾಟೀಲ, ಮುಖಂಡರಾದ ದಾದಾಗೌಡ ಪಾಟೀಲ, ರಾಜೇಂದ್ರ ಪೋತದಾರ, ಅಪ್ಪಾಸಾಹೇಬ ಮಳಮಳಸಿ, ಅಭಯ ಪಾಟೀಲ, ಗಜಾನನ ಯರಂಡೋಲಿ, ಪ್ರಕಾಶ ಹಳ್ಳೋಳ್ಳಿ, ಮುರಗೆಪ್ಪ ಮಗದುಮ್, ಆರ್.ಎಂ.ಪಾಟೀಲ, ರಮೇಶ ತೇಲಿ, ಎಸ್.ಎಸ್. ಹುಂಡೇಕರ, ಲಕ್ಷ್ಮಣ ಹಳಮನಿ, ಪ್ರಕಾಶ ಹಳ್ಳೋಳ್ಳಿ, ದೋಡಿರಾಮ ಅವಳೇಕರ, ಇಂದ್ರಜಿತ ಪಾಟೀಲ, ಸುನೀಲ ಪಾಟೀಲ, ದತ್ತಾತ್ರೇಯ ಕದಂ, ತುಕಾರಾಮ ರಸಾಳ, ರಮೇಶ ಅವಳೇಕರ, ಮಾರುತಿ ಸಾವಂತ, ಬಾಪು ಪಾಟೀಲ, ಬಾಳು ಮಗದುಮ್, ಮಹಾಂತೇಶ ಕಾಂಬಳೆ, ದಿಲೀಪ ಪವಾರ, ಮನೋಹರ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net