15 ದಿನದಲ್ಲಿ 7.81 ಲಕ್ಷ ಕಾರ್ವಿುಕರಿಗೆ ಹಣ ಜಮೆ

Shivaram Hebbar
Published on

ಶಿರಸಿ: ಕೋವಿಡ್- 19 ವೈರಸ್ ಭೀತಿಯ ಕಾರಣ ಜಾರಿಗೊಂಡ ಲಾಕ್​ಡೌನ್​ನಿಂದ ಕಾರ್ವಿುಕರು ಸಂಕಷ್ಟದಲ್ಲಿದ್ದು, 15 ದಿನಗಳೊಳಗೆ ರಾಜ್ಯದಲ್ಲಿ ಬಾಕಿ ಉಳಿದಿರುವ 7.81 ಲಕ್ಷ ಕಾರ್ವಿುಕರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಕಾರ್ವಿುಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ದಾಸನಕೊಪ್ಪದಲ್ಲಿ ಕಾರ್ವಿುಕರಿಗೆ ಶನಿವಾರ ದಿನಸಿ ಕಿಟ್ ವಿತರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 21.50 ಲಕ್ಷ ಕಾರ್ವಿುಕರಿದ್ದಾರೆ. ಲಾಕ್​ಡೌನ್ ಕಾರಣ ಸಂಕಷ್ಟದಲ್ಲಿರುವ 12.76 ಲಕ್ಷ ಕಾರ್ವಿುಕರ ಖಾತೆಗೆ ಸರ್ಕಾರದಿಂದ ಈಗಾಗಲೇ ಹಣ ಜಮಾ ಮಾಡಲಾಗಿದೆ. 7.81 ಲಕ್ಷ ಕಾರ್ವಿುಕರಿಗೆ ಹಣ ಬಿಡುಗಡೆ ಆಗಬೇಕಿದೆ. ಮೂರು ವರ್ಷಕ್ಕೊಮ್ಮೆ ಕಾರ್ವಿುಕರ ನೋಂದಣಿ ನವೀಕರಣ ಆಗಬೇಕು. ಆದರೆ, ಕೆಲ ಕಾರ್ವಿುಕರ ನೋಂದಣಿ ನವೀಕರಣಗೊಂಡಿಲ್ಲ. ಹೀಗಾಗಿ ಅವರ ಬ್ಯಾಂಕ್ ಖಾತೆ ಸ್ಥಗಿತವಾಗಿದೆ. ಸ್ಥಗಿತಗೊಂಡ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಿಲ್ಲ. ಇಷ್ಟು ಕಾರ್ವಿುಕರಿಗೆ ಹಣ ಜಮಾವಣೆ ವಿಳಂಬವಾಗಲು ಕಾರಣವಾಗಿದೆ. ಆದರೂ ಎಲ್ಲ ಕಾರ್ವಿುಕರಿಗೆ ಹಣ ನೀಡುವಂತೆ ಸೂಚಿಸಲಾಗಿದೆ. ಈಗಾಗಲೇ 321 ಕೋಟಿ ರೂ. ನೀಡಲಾಗಿದ್ದು, 220 ಕೋಟಿ ರೂ. ನೀಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net