15 ಅಡಿ ಉದ್ದದ ಹೆಬ್ಬಾವು ರಕ್ಷಣೆ

Published on

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮಂಗಳವಾರ ಭಾರಿ ಗಾತ್ರದ ಹೆಬ್ಬಾವನ್ನು ಉರಗ ಪ್ರೇಮಿ ಸ್ನೇಕ್ ಬಾಬು ಹಿಡಿದು ಸಂರಕ್ಷಿಸಿದರು. ಗ್ರಾಮದ ಗದ್ದೆಮಾಳದಲ್ಲಿ ಸುಮಾರು 15 ಅಡಿ ಉದ್ದ 50 ಕೆಜಿ ತೂಕ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ವೇಳೆ ಸ್ಥಳೀಯರು ಸ್ನೇಕ್ ಬಾಬು ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ನೇಕ್ ಬಾಬು ಆಗಮಿಸಿ ಹೆಬ್ಬಾವನ್ನು ಹಿಡಿದು ಅರಣ್ಯ ಅಧಿಕಾರಿಗಳ ಸೂಚನೆಯಂತೆ ಕಾಡಿಗೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net