

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಗುರುವಾರ ರಾತ್ರಿ ಕಳ್ಳರು ವೈನ್‌ಶಾಪ್‌ನ ಹಿಂಬದಿಯ ಪತ್ರಾಸ್ ಒಡೆದು ಒಳನುಗ್ಗಿ 15 ಸಾವಿರ ರೂ. ಮೌಲ್ಯದ ಮದ್ಯ ಕಳ್ಳತನ ಮಾಡಿದ್ದಾರೆ. ಶೇಡಬಾಳ- ಉಗಾರ ರಸ್ತೆ ಮಾರ್ಗಕ್ಕೆ ಹೊಂದಿಕೊಂಡಿರುವ ಸಂಜು ಭಿರಡಿ ಮಾಲೀಕತ್ವದ ಭಾಗ್ಯಲಕ್ಷ್ಮೀ ವೈನ್ಸ್‌ನಲ್ಲಿ ಕಳ್ಳತನ ನಡೆದಿದೆ. ಸ್ಥಳಕ್ಕೆ ಅಥಣಿ ಅಬಕಾರಿ ಇಲಾಖೆ ಅಧಿಕಾರಿಗಳಾದ ಮಹೇಶ ಧೂಳಣ್ಣವರ ಹಾಗೂ ಸಿಬ್ಬಂದಿ ಭೇಟಿ ನೀಡಿ ವೈನ್‌ಶಾಪ್‌ಅನ್ನು ಸೀಜ್ ಮಾಡಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.